ಹಮಾಸಿಗರನ್ನ ತಿಂಗಳಲ್ಲೇ ಸದೆಬಡೆದು ಯುದ್ದ ಗೆಲ್ತಿವಿ: ನೆತನ್ಯಾಹು!

masthmagaa.com:

ಇಸ್ರೇಲ್‌ ಹಮಾಸ್‌ ಯುದ್ಧ ಶುರುವಾಗಿ ಫೆಬ್ರವರಿ 7ನೇ ತಾರಿಖು ಬಂದ್ರೆ ನಾಲ್ಕು ತಿಂಗಳು ತುಂಬುತ್ತೆ. ಆದರೆ ಈಗ ಅರ್ಧದಷ್ಟು ಹಮಾಸ್‌ಗಳನ್ನ ಹೊಡೆದುರುಳಿಸಿದ್ದೀವಿ ಅಂತ ಇಸ್ರೇಲ್‌ ಹೇಳಿದೆ. ಇದೇ ವೇಳೆ ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು, ಹಮಾಸ್‌ ಮೇಲೆ ಸಂಪೂರ್ಣ ವಿಜಯ ಸಾಧಿಸೋದು ನಮ್ಮ ಗುರಿ. ಹೀಗಾಗಿ ನಾವು ಗಾಜಾದೆಲ್ಲೆಡೆ ದಾಳಿಯನ್ನ ಮುಂದುವರೆಸ್ತಿವಿ. ಕೆಲವೇ ಕೆಲವು ತಿಂಗಳಲ್ಲೆ ನಾವು ಯುದ್ದ ಗೆಲ್ತೀವಿ ಅಂದಿದ್ದಾರೆ. ಮತ್ತೊಂಡೆದೆ ಗಾಜಾ ಸ್ಟ್ರಿಪ್‌ನ ಅರ್ಧದಷ್ಟು ಜನ ಆಶ್ರಯ ಪಡೆದಿರೋ ರಫಾ ನಗರವನ್ನ ಟಾರ್ಗೆಟ್‌ ಮಾಡಿ ಇಸ್ರೇಲ್‌ ಭೀಕರ ದಾಳಿ ಮಾಡ್ತಿದೆ. ಇದ್ರ ಮಧ್ಯೆ ಗಾಜಾ ಯುದ್ದಕ್ಕೆ ಬ್ರೇಕ್‌ ಹಾಕಲು ಅಮೆರಿಕದ ಸ್ಟೇಟ್‌ ಸೆಕ್ರೆಟರಿ ಆಂಟೋನಿ ಬ್ಲಿಂಕನ್‌ ಮಿಡ್ಲ್‌ ಈಸ್ಟ್ ದೇಶಗಳ ಪ್ರವಾಸ ಕೈಗೊಂಡಿದ್ದಾರೆ. ಆರಂಭದಲ್ಲಿ ಸೌದಿ ಅರೆಬಿಯಾದ ಕ್ರೌನ್‌ ಪ್ರಿನ್ಸ್‌ ಮೊಹಮ್ಮದ್‌ ಬಿನ್‌ ಸುಲ್ತಾನರನ್ನ ಮೀಟ್‌ ಮಾಡಿರೋ ಬ್ಲಿಂಕನ್‌, ಗಾಜಾ ಕದನ ವಿರಾಮದ ಬಗ್ಗೆ ಹಾಗೂ ಅಲ್ಲಿ ಶಾಂತಿ ಸ್ಥಾಪಿಸೋ ಸಂಬಂಧ ಮಾತುಕತೆ ನಡೆಸಿದ್ದಾರೆ. ಅಲ್ದೇ ಗಾಜಾದಲ್ಲಿ ತುರ್ತು ಮಾನವೀಯ ನೆರವು ಪೂರೈಸುವ ಬಗ್ಗೆ ಚರ್ಚೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply