ಅಮೆರಿಕದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ

masthmagaa.com:

ಕೊರೋನಾ ಸೋಂಕಿತರ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿರೋ ಅಮೆರಿಕದಲ್ಲಿ ಏಪ್ರಿಲ್ 19ರಿಂದ ಕೊರೋನಾ ಲಸಿಕೆಯನ್ನ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಓಪನ್ ಅಪ್ ಮಾಡಲಾಗುತ್ತೆ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಣೆ ಮಾಡಿದ್ದಾರೆ. ಈ ಹಿಂದೆ ಮೇ 1ರ ಡೆಡ್​ಲೈನ್ ಹಾಕಿಕೊಳ್ಳಲಾಗಿತ್ತು. ಆದ್ರೀಗ ಅದಕ್ಕೂ ಮುಂಚೆನೇ, ಏಪ್ರಿಲ್​ 19ರಿಂದಲೇ ಅದನ್ನ ಜಾರಿಗೆ ತರಲು ಅಮೆರಿಕ ಮುಂದಾಗಿದೆ. ನೋ ಮೋರ್ ಕನ್ಫೂಸಿಂಗ್ ರೂಲ್ಸ್, ನೋ ಮೋರ್ ಕನ್ಫೂಸಿಂಗ್ ರಿಸ್ಟ್ರಿಕ್ಷನ್ಸ್ ಅಂತ ಬೈಡೆನ್ ಹೇಳಿದ್ದಾರೆ. ಇದುವರೆಗೆ ಅತಿಹೆಚ್ಚು ಲಸಿಕೆ ಹಾಕಿದ ದೇಶ ಅಂದ್ರೆ ಅದು ಅಮೆರಿಕ. ಅಲ್ಲಿ ಇದುವರೆಗೆ 15 ಕೋಟಿಗೂ ಹೆಚ್ಚು ಡೋಸ್​ ಲಸಿಕೆ ಹಾಕಲಾಗಿದೆ. ಸುಮಾರು 6 ಕೋಟಿ ಜನ ಎರಡೂ ಡೋಸ್ ಚುಚ್ಚಿಸಿಕೊಂಡಿದ್ದಾರೆ. ಅಧಿಕಾರ ವಹಿಸಿಕೊಂಡ 100 ದಿನದಲ್ಲಿ 20 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದಾರೆ ಬೈಡೆನ್. ಅದೇ ವೇಗದಲ್ಲಿ ಏನಾದ್ರೂ ಮುಂದಕ್ಕೆ ಹೋದ್ರೆ, ಜನಸಂಖ್ಯೆಯಲ್ಲಿ 3ನೇ ದೊಡ್ಡ ದೇಶವಾದ, ಸುಮಾರು 35 ಕೋಟಿ ಜನಸಂಖ್ಯೆ ಇರೋ ಅಮೆರಿಕದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಎಲ್ಲರೂ ಕೊರೋನಾ ಲಸಿಕೆ ಪಡೆದುಕೊಂಡಿರುತ್ತಾರೆ.

-masthmagaa.com

Contact Us for Advertisement

Leave a Reply