ಯೋಜನೆಗೆ ಜೈ ಅನ್ನಿ..ಇಲ್ಲವಾದ್ರೆ ನಮ್ಮ ಊಟ ಚೀನಾ ತಿನ್ನುತ್ತೆ: ಬೈಡೆನ್

masthmagaa.com:

ದೇಶದ ಆರ್ಥಿಕತೆಯ ಚೇತರಿಕೆಗೆ ಲಕ್ಷಾಂತರ ಕೋಟಿ ಮೊತ್ತದ ಹೂಡಿಕೆಯ ಯೋಜನೆಗಳಿಗೆ ಕಾಂಗ್ರೆಸ್ ಆದಷ್ಟು ಬೇಗ ಅನುಮೋದಿಸಬೇಕು..ಇಲ್ಲವಾದ್ರೆ ಚೀನಾ ನಮ್ಮ ಊಟವನ್ನು ತಿಂದು ಬಿಡುತ್ತೆ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ಧಾರೆ. ಅಂದಹಾಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಜೋ ಬೈಡೆನ್ 2.3 ಲಕ್ಷ ಕೋಟಿ ಡಾಲರ್​​ ಅಂದ್ರೆ 172 ಲಕ್ಷ ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆ ಮುಂದಿಟ್ಟಿದ್ಧಾರೆ. ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿ, ಬ್ರಾಡ್​ಬಾಂಡ್ ಇಂಟರ್​ನೆಟ್, ಎಲೆಕ್ಟ್ರಿಕ್ ಕಾರ್​​ಗಳ ಸಂಶೋಧನೆ ಮತ್ತು ಅಭಿವೃದ್ಧಿ ಕೂಡ ಈ ಯೋಜನೆಯಲ್ಲಿ ಸೇರಿವೆ.. ಈ ಮೂಲಕ ಜಾಗತಿಕ ಮಟ್ಟದಲ್ಲಿ ಅಮೆರಿಕಾ ಸ್ಥಾನವನ್ನು ಮುಂದುವರಿಸಬೇಕು.. ಅಮೆರಿಕದ ಪುನರ್​ನಿರ್ಮಾಣಕ್ಕೆ ಈ ಯೋಜನೆ ಬ್ಲೂ ಕಾಲರ್ ಬ್ಲೂಪ್ರಿಂಟ್ ರೀತಿ ಕೆಲಸ ಮಾಡುತ್ತೆ.. ಇದೇ ರೀತಿ ಮುಂದುವರಿದ್ರೆ ನಮ್ಮ ಊಟವನ್ನು ಚೀನಾ ತಿಂದು ಬಿಡುತ್ತೆ. ಈಗಾಗಲೇ ಚೀನಾ ಆರ್ಥಿಕವಾಗಿ ನಮ್ಮ ಊಟವನ್ನು ತಿಂತಾ ಇದೆ. ಸಂಶೋಧನೆಯಲ್ಲಿ ಕೋಟಿಗಟ್ಲೆ ದುಡ್ಡು ಖರ್ಚು ಮಾಡ್ತಿದೆ ಅನ್ನೋದು ಬೈಡೆನ್ ವಾದ.. ಆದ್ರೆ ಈ ಯೋಜನೆಗೆ ಡೆಮಾಕ್ರಟಿಕ್ ಸದಸ್ಯರಿಂದ ಫುಲ್ ಬೆಂಬಲ ಇದ್ರೂ ರಿಪಬ್ಲಿಕನ್ಸ್ ವಿರೋಧಿಸುತ್ತಲೇ ಇದ್ದಾರೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ವೆಚ್ಚ ಮಾಡೋದಕ್ಕೆ ಅವರು ಒಪ್ಪುತ್ತಿಲ್ಲ. ಇದೇ ವಿಚಾರವಾಗಿ ಮುಂದಿನ ವಾರ ರಿಪಬ್ಲಿಕನ್ ಪಕ್ಷದ ಹಿರಿಯ ಸದಸ್ಯರ ಜೊತೆ ಬೈಡೆನ್ ವೈಟ್​​ಹೌಸ್​​​ನಲ್ಲಿ ಮಾತುಕತೆ ನಡೆಸಲಿದ್ದಾರೆ.

-masthmagaa.com

Contact Us for Advertisement

Leave a Reply