ತನ್ನ ಮಿತ್ರ ದೇಶಗಳಿಗೆ 7.88 ಲಕ್ಷ ಕೋಟಿ ನೆರವು ನೀಡಿದ ಅಮೆರಿಕ!

masthmagaa.com:

ಜಾಗತಿಕವಾಗಿ ಯುದ್ದದ ಕಾರ್ಮೋಡ ಆವರಿಸಿಕೊಳ್ತಿದ್ರೂ ಆ ಕಡೆ ಅಮೆರಿಕಗೆ ಮಾತ್ರ ಜಗತ್ತು ನೆಮ್ದಿಯಾಗಿರೋದು ಇಷ್ಟ ಇಲ್ಲ ಅನ್ಸುತ್ತೆ. ಈಗಾಗಲೇ ರಷ್ಯಾ ವಿರುದ್ದ ಯುಕ್ರೇನ್‌ಗೆ ಬಿಲಿಯನ್‌ ಗಟ್ಟಲೇ ಹಣ ಸುರಿತಿರೋ ಅಮೆರಿಕ ಮತ್ತೊಮ್ಮೆ ಭಾರೀ ಮೊತ್ತದ ಸಹಾಯ ಘೋಷಿಸಿದೆ. ಒಂದಲ್ಲ ಎರಡಲ್ಲ 95 ಬಿಲಿಯನ್‌ ಡಾಲರ್‌ ಅಂದ್ರೆ 7.88 ಲಕ್ಷ ಕೋಟಿ ರೂಪಾಯಿ ವೆಚ್ಚದ ಸಹಾಯವನ್ನ ಯುಕ್ರೇನ್‌,ತೈವಾನ್‌ ಮತ್ತು ಇಸ್ರೇಲ್‌ಗೆ ನೀಡೋದಾಗಿ ಅಮೆರಿಕ ಹೇಳಿದೆ. ಈ ಬಿಲ್‌ಗೆ ಅಧ್ಯಕ್ಷ ಬೈಡೆನ್‌ ಸೈನ್‌ ಕೂಡ ಹಾಕಿದ್ದಾರೆ. ಈ ಪೈಕಿ 61 ಬಿಲಿಯನ್‌ ಡಾಲರ್‌ ಅಂದ್ರೆ 5.06 ಲಕ್ಷ ಕೋಟಿ ರೂಪಾಯಿ ವೆಚ್ಚದ ಮಿಲಟರಿ ಪ್ಯಾಕೇಜ್‌ನ್ನ ಯುಕ್ರೇನ್‌ಗೆ ಕೊಡೋಕೆ ತಿರ್ಮಾನಿಸಲಾಗಿದೆ. ಅಲ್ದೆ ಆ ನೆರವನ್ನ ತಕ್ಷಣವೇ ಯುಕ್ರೇನ್‌ಗೆ ನೀಡಲಾಗುತ್ತೆ ಅಂತ ಬೈಡನ್‌ ತಿಳಿಸಿದ್ದಾರೆ. ಇನ್ನುಳಿದಿದ್ದು ಇಸ್ರೇಲ್‌ ಮತ್ತು ತೈವಾನ್‌ಗೆ ಅಂತ ಬೈಡೆನ್‌ ಹಂಚಿದ್ದಾರೆ.

-masthmagaa.com

Contact Us for Advertisement

Leave a Reply