ಚೀನಾ ಉಪಟಳಕ್ಕೆ ಕೌಂಟರ್‌ ಕೊಡಲು ಅಮೆರಿಕ, ಜಪಾನ್‌, ಫಿಲಿಫೈನ್ಸ್‌ ಸಜ್ಜು!

masthmagaa.com:

ಇಂಡೊ ಫೆಸಿಫಿಕ್‌ ರೀಜನ್‌ನಲ್ಲಿ ಚೀನಾದಿಂದ ಉದ್ವಿಗ್ನತೆ ಹೆಚ್ಚಿದ ವಿಚಾರವಾಗಿ ಅಮೆರಿಕ, ಜಪಾನ್‌ ಹಾಗೂ ಫಿಲಿಫೈನ್ಸ್‌ ಜಂಟಿ ಮಾತುಕತೆ ನಡೆಸಿವೆ. ಅಮೆರಿಕ ಅಧ್ಯಕ್ಷ ಜೊ ಬೈಡನ್‌ ವೈಟ್‌ಹೌಸ್‌ನಲ್ಲಿ ಜಪಾನ್‌ ಪ್ರಧಾನಿ ಫ್ಯೂಮಿಯೊ ಕಿಶಿದಾ ಹಾಗೂ ಫಿಲಿಫೈನ್ಸ್‌ ಅಧ್ಯಕ್ಷ ಫರ್ಡಿನಾಂಡ್‌ ಮಾರ್ಕೊಸ್‌ ಜೂನಿಯರ್‌ ಅವ್ರನ್ನ ಕೂರಿಸಿಕೊಂಡು ಮಾತುಕತೆ ನಡೆಸಿದ್ದಾರೆ. ಈ ಮೂಲಕ ಈ ಮೂರು ದೇಶಗಳು ವಿವಾದಿತ ದಕ್ಷಿಣ ಚೀನಾ ಪ್ರದೇಶದಲ್ಲಿ ಜಂಟಿಯಾಗಿ ನೌಕಾ ಗಸ್ತು ಕಾರ್ಯಾಚರಣೆ ನಡೆಸೊಕೆ ಸಜ್ಜಾಗ್ತಿವೆ ಅಂತೇಳಲಾಗ್ತಿದೆ. ಈ ವಿಚಾರವಾಗಿ ಮೂರು ದೇಶಗಳು ಕಳೆದ ವರ್ಷ ಮಾತುಕತೆ ನಡೆಸಿ ಒಂದು ನಿರ್ಧಾರಕ್ಕೆ ಬಂದಿದ್ವು. ಈಗ ಆ ನಿರ್ಧಾರವನ್ನ ಕಾರ್ಯಗತಗೊಳಿಸಲು ಮುಂದಾಗಿದ್ದು, ಈ ಬಗ್ಗೆ ಸದ್ಯದಲ್ಲೆ ಅಧಿಕೃತ ಘೋಷಣೆ ನೀಡಿ ಚೀನಾಗೆ ತಕ್ಕ ಪ್ರತಿರೋಧ ತೋರಲು ತಯಾರಾಗ್ತಿವೆ ಅಂತ ವರದಿಯಾಗಿದೆ.

ಮತ್ತೊಂದೆಡೆ ಜಾಗತಿಕ ವ್ಯವಹಾರಗಳಲ್ಲಿ ಅಮೆರಿಕ ಪ್ರಮುಖ ಪಾತ್ರವಹಿಸೊದನ್ನ ಮುಂದುವರಿಸಬೇಕು ಅಂತ ಜಪಾನ್‌ ಪ್ರಧಾನಿ ಫ್ಯೂಮಿಯೊ ಕಿಶಿದಾ ಒತ್ತಾಯಿಸಿದ್ದಾರೆ. ಸದ್ಯ ಅಮೆರಿಕ ಪ್ರವಾಸದಲ್ಲಿರೊ ಕಿಶಿದಾ, ವೈಟ್‌ಹೌಸ್‌ನಲ್ಲಿ ಈ ರೀತಿ ಹೇಳಿ ತನ್ನ ಕ್ಲೋಸ್‌ ಫ್ರೆಂಡ್‌ ಅಮೆರಿಕ ಕಡೆ ಶಹಬಾಶ್‌ ಅನ್ಸಕೊಳ್ಳೊ ಕೆಲ್ಸ ಮಾಡಿದ್ದಾರೆ. ಅಲ್ಧೇ ಅಮೆರಿಕ ಒಂದೇ ಅಂತರಾಷ್ಟ್ರೀಯ ಕ್ರಮಗಳನ್ನ ನಿಭಾಯಿಸೋದ ಬೇಡ, ಈ ವಿಚಾರದಲ್ಲಿ ಜಪಾನ್‌ ಕೂಡ ಹೆಗಲಿಗೆ ಹೆಗಲು ಕೊಟ್ಟು ಅಮೆರಿಕದ ಜೊತೆಗಿರುತ್ತೆ ಅಂತ ಕಿಶಿದಾ ತಮ್ಮ ಆಪ್ತ ಮಿತ್ರನಿಗೆ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply