ಟ್ರ್ಯಾಕ್ಟರ್‌ ಹರಿದು ಬಿಹಾರ್‌ ಪೊಲೀಸ್‌ ಸ್ಥಳದಲ್ಲೇ ಸಾವು!

masthmagaa.com:

ಮೈಮೇಲೆ ಅಕ್ರಮವಾಗಿ ಮರಳು ಸಾಗಾಟ ಮಾಡ್ತಿದ್ದ ಟ್ರ್ಯಾಕ್ಟರ್‌ ಹರಿದು ಪೊಲೀಸ್‌ ಇನ್ಸ್ಪೆಕ್ಟರ್‌ ಸಾವನ್ನಪ್ಪಿರೋ ಘಟನೆ ಬಿಹಾರದಲ್ಲಿ ನಡೆದಿದೆ. ಈ ಟ್ರ್ಯಾಕ್ಟರ್‌ ಹರಿದು ಪೊಲೀಸ್‌ ಇನ್ಸ್ಪೆಕ್ಟರ್‌ ಬಲಿಯಾಗಿರೋದು ಮಾತ್ರವಲ್ಲದೆ, ಹೋಮ್‌ ಗಾರ್ಡ್‌ಗೆ ಕೂಡ ತೀವ್ರ ಗಾಯಗಳಾಗಿವೆ. ಮೃತ ಪೊಲೀಸ್‌ ಇನ್ಸ್‌ಪೆಕ್ಟರ್‌ರನ್ನ ಪ್ರಭಾತ್‌ ರಂಜನ್‌ ಅಂತ ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಗಾಯಗೊಂಡ ಹೋಮ್‌ ಗಾರ್ಡ್‌ ರಾಜೇಶ್‌ ಕುಮಾರ್‌ ಅವ್ರನ್ನ ಸಿಟಿಯ ಪ್ರೈವೇಟ್‌ ಕ್ಲಿನಿಕ್‌ಗೆ ದಾಖಲಿಸಲಾಗಿದ್ದು, ಅವ್ರ ಸ್ಥಿತಿ ಕೂಡ ಗಂಭೀರವಾಗಿದೆ ಅಂತ ಅಲ್ಲಿನ ಪೊಲೀಸ್‌ ತಿಳಿಸಿದ್ದಾರೆ. ಅಂದ್ಹಾಗೆ ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ, ಪೊಲೀಸ್‌ ಅಧಿಕಾರಿಗಳು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಪ್ರಾರಂಭಿಸಿದ್ದಾರೆ.

-masthmagaa.com

Contact Us for Advertisement

Leave a Reply