ಬಿಹಾರ್‌ ಪ್ರಶ್ನೆ ಪತ್ರಿಕೆ ಸೋರಿಕೆ! 270 ಆಕಾಂಕ್ಷಿಗಳು ವಶಕ್ಕೆ!

masthmagaa.com:

ಬಿಹಾರ್‌ನಲ್ಲಿ ಮಾರ್ಚ್‌ 15 ರಂದು ನಡೆಸಲಾದ ಶಿಕ್ಷಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಇದೀಗ 270 ಪರೀಕ್ಷಾ ಆಕಾಂಕ್ಷಿಗಳನ್ನ ವಶಕ್ಕೆ ಪಡೆಯಲಾಗಿದೆ. ಸದ್ಯ ಬಿಹಾರ್‌ ಪೊಲೀಸರು ಇವ್ರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಮೂಲಕ ಪೇಪರ್‌ ಲೀಕ್‌ನಲ್ಲಿ ಭಾಗಿಯಾಗಿರೋ ಗ್ಯಾಂಗ್‌ನ ಇನ್ನಷ್ಟು ಸದಸ್ಯರನ್ನ ಅರೆಸ್ಟ್‌ ಮಾಡಲಾಗಿದೆ. ಹೀಗಂತ ಬಿಹಾರ್‌ ಪೊಲೀಸ್‌ ಎಕನಾಮಿಕ್‌ ಆಫೆನ್ಸಸ್‌ ಯುನಿಟ್‌ ಮಾಹಿತಿ ನೀಡಿದೆ. ಅಂದ್ಹಾಗೆ ಪೇಪರ್‌ ಲೀಕ್‌ ಸಂಬಂಧ ಈಗಾಗಲೇ 5 ಮಂದಿಯನ್ನ ಅರೆಸ್ಟ್‌ ಮಾಡಲಾಗಿತ್ತು. ಅಲ್ದೇ ಕ್ವೆಷನ್‌ ಪೇಪರ್ಸ್‌, ಕಂಪ್ಯೂಟರ್ಸ್‌, ಲ್ಯಾಪ್‌ಟಾಪ್ಸ್‌, ಪ್ರಿಂಟರ್ಸ್‌ ಮತ್ತು ಪೆನ್‌ ಡ್ರೈವ್‌ಗಳನ್ನೂ ವಶಕ್ಕೆ ಪಡೆಯಲಾಗಿತ್ತು.

-masthmagaa.com

Contact Us for Advertisement

Leave a Reply