ಒಂದೇ ಮಂಟಪದಲ್ಲಿ 3 ಮದ್ವೆ.. ಇಬ್ಬರು ವರರು ಅದಲು ಬದಲು.. ಆಮೇಲೆ ಆಗಿದ್ದೇನು

masthmagaa.com:

ಮೂರು ಜೋಡಿಗಳಿಗೆ ಮದ್ವೆ ನಡೀತಿದ್ದ ಮಂಟಪದಲ್ಲಿ ಇಬ್ಬರು ವರರು ಅದಲು ಬದಲಾದ ವಿಚಿತ್ರ ಘಟನೆ ಮಧ್ಯಪ್ರದೇಶದ ಅಸ್ಲಾನಾ ಗ್ರಾಮದಲ್ಲಿ ನಡೆದಿದೆ. ರಮೇಶ್‌ ಭೀವೆರೆ ಅವ್ರ ಮೂರು ಪುತ್ರಿಯರಾದ ನಿಖಿತಾ, ಕರಿಶ್ಮಾ ಮತ್ತು ಕೋಮಲ್‌ರ ಮದ್ವೆ ಒಂದೆ ದಿನ ಒಂದೇ ಸ್ಥಳದಲ್ಲಿ ನಡೆಯುತಿತ್ತು. ಮದ್ವೆ ರಾತ್ರಿ ಪವರ್‌ ಕಟ್‌ ಆಗಿದೆ. ಹಾಗೂ ಇಬ್ರು ಒಂದೆ ರೀತಿ ಬಟ್ಟೆ ಧರಿಸಿದ್ದರಿಂದ ನಿಖಿತಾ ಮತ್ತು ಕರಿಶ್ಮಾ ಎಂಬುವವರ ವರರು ಅದಲು ಬದ್ಲಾಗಿದ್ದಾರೆ. ನಂತ್ರ ಸಪ್ತಪದಿ ತುಳಿಯುವಾಗ ಪವರ್‌ ಬಂದಾಗಲೇ ಅದಲು ಬದಲಾಗಿದ್ದ ವರರನ್ನ ಅವರವರ ವಧು ಬಳಿ ಬಿಡಲಾಗಿದೆ. ಈ ಘಟನೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

-masthmagaa.com

Contact Us for Advertisement

Leave a Reply