US ಓಪನ್‌: ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡ ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಝ್‌

masthmagaa.com:

ವರ್ಷದ ಕೊನೆಯ ಗ್ರ್ಯಾಂಡ್‌ ಸ್ಲ್ಯಾಮ್‌ ಆದ ಯುಎಸ್‌ ಓಪನ್‌ನ ಪುರುಷರ ವಿಭಾಗದಲ್ಲಿ ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಝ್‌ ತಮ್ಮ ಚೊಚ್ಚಲ ಗ್ರ್ಯಾಂಡ್‌ ಸ್ಲ್ಯಾಮ್‌ ಮುಡಿಗೇರಿಸಿಕೊಂಡಿದ್ದಾರೆ. ಫೈನಲ್‌ ಹಣಾಹಣಿಯಲ್ಲಿ 19 ವರ್ಷದ ಅಲ್ಕರಾಝ್‌, ನಾರ್ವೆಯ ಕ್ಯಾಸ್ಪರ್‌ ರೂಡ್‌ ವಿರುದ್ದ ಜಯಗಳಿಸಿದ್ದಾರೆ. ಇನ್ನು ಈ ಗೆಲುವಿನೊಂದಿಗೆ ಅಲ್ಕರಾಜ್‌ ATP ಅಂದ್ರೆ ಅಸೋಸಿಯೇಷನ್‌ ಆಫ್‌ ಟೆನ್ನಿಸ್‌ ಪ್ರೋಫೆಷನಲ್ಸ್‌ ರ್ಯಾಂಕಿಂಗ್‌ನಲ್ಲಿ ನಂಬರ್‌ 1 ಸ್ಥಾನ ಪಡೆದುಕೊಂಡಿದ್ದಾರೆ. ಜೊತೆಗೆ ATPಯಲ್ಲಿ ನಂಬರ್‌ 1 ಸ್ಥಾನ ಪಡೆದ ಅತಿ ಕಿರಿಯ ವ್ಯಕ್ತಿ ಅನ್ನೊ ಹೆಗ್ಗಳಿಕೆಗೂ ಅಲ್ಕರಾಜ್‌ ಪಾತ್ರರಾಗಿದ್ದಾರೆ.

 

Contact Us for Advertisement

Leave a Reply