ಅರ್ಶ್‌ದೀಪ್‌ ವಿಕಿಪೀಡಿಯಾದಲ್ಲಿ ಖಾಲಿಸ್ತಾನ್‌ ಅಂತ ತಿದ್ದಿದ ಕಿಡಿಗೇಡಿಗಳು!

masthmagaa.com:

ನಿನ್ನೆ ನಡೆದ ಇಂಡಿಯಾ-ಪಾಕ್‌ ಪಂದ್ಯದಲ್ಲಿ ಕ್ಯಾಚ್‌ ಬಿಟ್ಟ ಭಾರತೀಯ ಕ್ರಿಕೆಟಿಗ ಆರ್ಶದೀಪ್‌ ಸಿಂಗ್‌ ಎಲ್ಲರ ಟೀಕೆಗೆ ಒಳಗಾಗಿದ್ದಾರೆ. ಆದರೆ ಯಾರೊ ಕಿಡಿಗೇಡಿಗಳು ಒಂದು ಹೆಜ್ಜೆ ಮುಂದೆ ಹೋಗಿ ವಿಕಿಪೀಡಿಯಾದಲ್ಲಿ ಇವರನ್ನ ಖಲಿಸ್ತಾನಿ ಉಗ್ರರ ಜೊತೆ ಲಿಂಕ್‌ ಇರೋದಾಗಿ ಹೇಳಿದ್ದಾರೆ. ಅಲ್ದೇ ಈ ಸುದ್ದಿಯನ್ನ ಎಡಿಟ್‌ ಮಾಡಿ ಶೇರ್‌ ಮಾಡಿದ್ದಾರೆ. ಇದು ಕೋಮು ಸಾಮರಸ್ಯಕ್ಕೆ ತೊಂದರೆ ಉಂಟು ಮಾಡಬಹುದು ಹಾಗೂ ಕ್ರಿಕೆಟಿಗನ ಕುಟುಂಬಕ್ಕೂ ಸಮಸ್ಯೆ ಆಗಬಹುದು ಅಂತೇಳಿ, ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವಾಲಯ ವಿಕಿಪೀಡಿಯಾ ಎಕ್ಸಿಕ್ಯುಟಿವ್‌ಗಳಿಗೆ ಸಮನ್ಸ್‌ ನೀಡಿದೆ. ಇತ್ತ ಎಲ್ಲರಿಂದಲೂ ಅತಿಯಾಗಿ ಟೀಕೆ ಗುರಿಯಾಗಿರೊ ಆರ್ಶದೀಪ್‌ಗೆ ಪಂಜಾಬ್‌ ನಾಯಕರು ಬೆನ್ನಿಗೆ ನಿಂತಿದ್ದಾರೆ. ಆರ್ಶದೀಪ್‌ ಅವರ ತಾಯಿಗೆ ಸಂದೇಶ ಕಳಿಸಿರೋ ಅಲ್ಲಿನ ಶಿಕ್ಷಣ ಸಚಿವ, ಅವ್ರಿಗೆ ಕೊನೇ ಓವರ್‌ನಲ್ಲಿ ಬಾಲ್ ಹಾಕೋಕೆ ಕೊಡ್ತಾರೆ ಅಂದ್ರೆ, ತಂಡದ ನಾಯಕನಿಗೆ ನಿಮ್ಮ ಮಗನ ಮೇಲೆ ಭರವಸೆ ಇದೆ ಅಂತ ಅರ್ಥ. ನಾವು-ನೀವು ಹೋಗಿ ಅವ್ರನ್ನ ಏರ್‌ಪೋರ್ಟ್‌ನಲ್ಲಿ ಬರಮಾಡಿಕೊಳ್ಳೋಣ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply