ಅಪೊಲೋ 11 ಮಿಷನ್‌ನ ಲ್ಯಾಂಡರ್‌ ಪತ್ತೆಹಚ್ಚಿದ ಚಂದ್ರಯಾನ-2 ಆರ್ಬಿಟರ್‌!

masthmagaa.com:

ಅಮೆರಿಕದ ಅಪೋಲೋ 11 ನಿಜಾನಾ ಸುಳ್ಳಾ ಅನ್ನೋ ಬಗ್ಗೆ ವಿಚಾರ ಸರಣಿಗಳು ಮುಂದುವರೆದಿರೋ ಹೊತ್ತಲ್ಲೇ ಇಸ್ರೋ ಮಹತ್ವದ ಮಾಹಿತಿ ಕಲೆ ಹಾಕಿದೆ. 2019ರಲ್ಲಿ ಹಾರಿದ್ದ ಚಂದ್ರಯಾನ-2 ಆರ್ಬಿಟರ್‌, ನಾಸಾದ ನೀಲ್‌ ಆರ್ಮ್‌ಸ್ಟ್ರಾಂಗ್‌ರನ್ನ ಚಂದ್ರನ ಮೇಲೆ ಲ್ಯಾಂಡ್‌ ಮಾಡಿಸಿದ್ದ ಲ್ಯಾಂಡರ್‌ನ್ನ ಅದು ಕ್ಯಾಪ್ಚರ್‌ ಮಾಡಿದೆ. ತನ್ನ ಹೈ ರೆಸೊಲ್ಯೂಷನ್‌ ಕ್ಯಾಮೆರಾ ಮೂಲಕ ಅಪೋಲೊ 11 ಮತ್ತು ಅಪೋಲೊ 12 ಲ್ಯಾಂಡಿಂಗ್‌ ಸೈಟ್‌ಗಳನ್ನ ಕೂಡ ಅದು ಪತ್ತೆಹಚ್ಚಿದೆ. ಅಂದಹಾಗೆ 1969ರಲ್ಲಿ ಈ ಅಪೊಲೊ 11 ಮಿಷನ್‌ ಚಂದ್ರನ ಮನೆಗೆ ಲಗ್ಗೆ ಇಟ್ಟಿತ್ತು..ಆಗ ನೀಲ್‌ ಆರ್ಮ್‌ಸ್ಟ್ರಾಂಗ್‌ ಚಂದ್ರನ ಮೇಲೆ ಕಾಲಿಟ್ಟಿದ್ರು. ಇನ್ನು ಎರಡನೇ, ಅಪೋಲೊ 12 ಮಿಷನ್‌ ಕೂಡ ಅದೇ ವರ್ಷ 1969ರಲ್ಲಿ ಚಂದ್ರನ ಮೇಲೆ ಲ್ಯಾಂಡ್‌ ಮಾಡಿತ್ತು. ಇವುಗಳ ಚಿತ್ರವನ್ನ ಚಂದ್ರಯಾನ-2 ಆರ್ಬಿಟರ್‌ 2021ರಲ್ಲೇ ಕ್ಯಾಪ್ಚರ್‌ ಮಾಡಿತ್ತು. ಈಗ ಅದನ್ನ ಭೂಮಿಗೆ ಕಳುಹಿಸಿಕೊಟ್ಟಿದೆ.

-masthmagaa.com

Contact Us for Advertisement

Leave a Reply