ಚಂದ್ರಯಾನ-3: ಐತಿಹಾಸಿಕ ಘಟನೆಗೆ ಕ್ಷಣಗಣನೆ! ಬೆಸ್ಟ್‌ ಆಫ್‌ ಲಕ್‌ ʻವಿಕ್ರಮ್‌ʼ!

masthmagaa.com:

ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಅಂತಿಮ ಘಟ್ಟ ತಲುಪಿದ್ದು, ಇಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಭಾರತ ತನ್ನ ಹೆಗ್ಗುರುತು ಮೂಡಿಸೋಕೆ ಸಜ್ಜಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ಜಗತ್ತು ಕಾತುರದಿಂದ ಕಾಯುತ್ತಿದೆ. ಸಾಫ್ಟ್‌ ಲ್ಯಾಂಡಿಂಗ್‌ಗೆ ಬೇಕಾದ ಸಕಲ ಸಿದ್ಧತೆಯನ್ನ ಇಸ್ರೋ ಮಾಡಿಕೊಂಡಿದೆ. ಈ ಯೋಜನೆ ಸಕ್ಸಸ್‌ ಆಗಲಿ ಹಾಗೂ ವಿಕ್ರಮ್‌ ಲ್ಯಾಂಡರ್‌ ಸ್ಮೂತ್‌ ಆಗಿ ಚಂದ್ರನ ಅಂಗಳಕ್ಕೆ ಕಾಲಿಡಲಿ ಅಂತ ದೇಶಾದ್ಯಂತ ದೇವಾಲಯ, ಮಸೀದಿ ಹಾಗೂ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಗ್ತಿದೆ. ಅಷ್ಟೆ ಅಲ್ದೆ ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಅನಿವಾಸಿ ಭಾರತೀಯರು ಕೂಡ ವಿಶೇಷ ಪೂಜೆ ಸಲ್ಲಿಸಿ ಭಾರತಕ್ಕೆ ಶುಭ ಹಾರೈಸಿದ್ದಾರೆ. ಅಂದ್ಹಾಗೆ ವಿಕ್ರಮ್‌ ಲ್ಯಾಂಡರ್‌ನ ಲ್ಯಾಂಡಿಂಗ್‌ ಪ್ರಕ್ರಿಯೆಯ ನೇರ ಪ್ರಸಾರ ಇಂದು ಸಂಜೆ 5.20ರಿಂದ ಪ್ರಾರಂಭವಾಗಲಿದ್ದು, 6.04ಕ್ಕೆ ವಿಕ್ರಮ್‌ ಚಂದ್ರನ ಮೇಲೆ ಇಳಿಯಲಿದೆ ಅಂತ ಇಸ್ರೋ ಮಾಹಿತಿ ನೀಡಿದೆ. ಈ ಹಿನ್ನಲೆಯಲ್ಲಿ ದೇಶಾದ್ಯಂತ ಶಾಲೆ ಕಾಲೇಜು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆಯ ಲೈವ್‌ ಸ್ಟ್ರೀಮ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಬ್ರಿಕ್ಸ್‌ ಶೃಂಗಸಭೆಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್‌ ಆಗಿ ದೇಶದ ಜನತೆ ಜೊತೆಯಲ್ಲಿ ಲೈವ್‌ ವೀಕ್ಷಿಸಲಿದ್ದಾರೆ ಅಂತ ಮಾಹಿತಿ ಸಿಕ್ಕಿದೆ.

-masthmagaa.com

Contact Us for Advertisement

Leave a Reply