ಮತ್ತೊಮ್ಮೆ ಚಂದ್ರನ ಮೇಲೆ ಲ್ಯಾಂಡ್‌ ಆದ ವಿಕ್ರಮ್‌! ಏನಿದು ಪ್ರಯೋಗ?

masthmagaa.com:

ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ಲ್ಯಾಂಡರ್‌ನ್ನ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿ ಇತಿಹಾಸ ಸೃಷ್ಟಿಸಿದ್ದ ಇಸ್ರೋ ಇದೀಗ ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ ಇಳಿದಿದ್ದ ʻಶಿವಶಕ್ತಿʼ ಪಾಯಿಂಟ್‌ನಿಂದ ಲ್ಯಾಂಡರ್‌ನ್ನ ಸುಮಾರು 40 ಸೆಂಟಿ ಮೀಟರ್‌ ಎತ್ತರಕ್ಕೆ ಹಾರಿಸಿ, ಬಳಿಕ 30 ರಿಂದ 40 ಸೆಂಟಿಮೀಟರ್‌ ಎತ್ತರದಿಂದ ಮತ್ತೆ ಲ್ಯಾಂಡ್‌ ಮಾಡಿಸಲಾಗಿದೆ. ಇದನ್ನ ʻಹಾಪ್‌ ಟೆಸ್ಟ್‌ʼ ಅಂತ ಕರೆಯಲಾಗಿದ್ದು, ಈ ಪ್ರಯೋಗ ಯಶಸ್ವಿಯಾಗಿದೆ ಅಂತ ಇಸ್ರೋ ಹೇಳಿದೆ. ಈ ಪ್ರಯೋಗದಿಂದ ಭವಿಷ್ಯದಲ್ಲಿ ಮನುಷ್ಯನನ್ನ ಚಂದ್ರನಲ್ಲಿಗೆ ಕಳಿಸಿ ಕರೆತರುವ ಯೋಜನೆಗೆ ಸಹಾಯವಾಗಲಿದ್ದು, ಅದಕ್ಕೆ ಈಗ ಕಿಕ್‌ ಸ್ಟಾರ್ಟ್‌ ಕೊಡಲಾಗಿದೆ ಅಂತ ಇಸ್ರೋ ಹೇಳಿದೆ. ಈ ಪ್ರಯೋಗದ ನಂತರ, ವಿಕ್ರಮ್‌ ಲ್ಯಾಂಡರ್​ನ ಎಲ್ಲಾ ವ್ಯವಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಪರೀಕ್ಷೆಯ ಸಮಯದಲ್ಲಿ, ಲ್ಯಾಂಡರ್‌ನಲ್ಲಿನ ಪೇಲೋಡ್‌ಗಳಾದ ChaSTE ಮತ್ತು ILSA ಗಳಿಗೆ ಕಮ್ಯಾಂಡ್‌ ನೀಡುವ ಮೂಲಕ ಫೋಲ್ಡ್‌ ಮಾಡಲಾಗಿದೆ. ಇದೀಗ ವಿಕ್ರಮ್‌ ಲ್ಯಾಂಡರ್‌ನ್ನ ಕೂಡ ಸ್ಲೀಪ್‌ ಮೋಡ್‌ನಲ್ಲಿ ಇರಿಸಲಾಗಿದೆ ಅಂತ ಇಸ್ರೋ ಮಾಹಿತಿ ನೀಡಿದೆ. ಅಂದ್ಹಾಗೆ ರೋವರ್‌ ಪ್ರಗ್ಯಾನ್‌ ಈಗಾಗಲೇ ಸ್ಲೀಪ್‌ ಮೋಡ್‌ನಲ್ಲಿದ್ದು, ಕಾರ್ಯಾಚರಣೆ ನಿಲ್ಲಿಸಲಾಗಿದೆ.

-masthmagaa.com

Contact Us for Advertisement

Leave a Reply