ನಾಳೆ ಲ್ಯಾಂಡ್‌ ಆಗುತ್ತಾ ಚಂದ್ರಯಾನ? ಇಸ್ರೋ ಹೇಳಿದ್ದೇನು?

masthmagaa.com:

ದೇಶದ ಬಹುನರೀಕ್ಷಿತ ಚಂದ್ರಯಾನ-3 ಚಂದ್ರನ ಅಂಗಳದಲ್ಲಿ ಇಳಿಯೋಕೆ ಕ್ಷಣಗಣನೆ ಆರಂಭವಾಗಿದೆ. ಬಾಹ್ಯಾಕಾಶದಲ್ಲಿ ಭಾರತ ಇತಿಹಾಸ ನಿರ್ಮಿಸೋಕೆ ಕೇವಲ ಇನ್ನೊಂದೇ ದಿನ ಬಾಕಿಯಿದ್ದು, ಪ್ರತಿಯೊಬ್ಬರೂ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಕೊನೆ ಹಂತದಲ್ಲಿ ಇಸ್ರೋ ಇಂದ ಬರುವ ಪ್ರತಿಯೊಂದು ಮಾಹಿತಿಯೂ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಇದೀಗ ಈ ಮೊದಲೇ ನಿಗದಿಪಡಿಸಿದಂತೆ ಯೋಜನೆ ನಡೆಯುತ್ತಿದ್ದು, ಚಂದ್ರಯಾನ-3ರ ಪ್ರಯಾಣ ಸುಗಮವಾಗಿ ಮುಂದುವರೆದಿದೆ ಅಂತ ಇಸ್ರೋ ಹೇಳಿದೆ. ಇದೇ ವೇಳೆ Mission Operations Complex (MOX) ಅಂದ್ರೆ ಈ ಕಾರ್ಯಾಚರಣೆಯನ್ನ ಆಪರೇಟ್‌ ಮಾಡ್ತಿರುವ ವಿಜ್ಞಾನಿಗಳ ತಂಡ ಸಾಕಷ್ಟು ಎನರ್ಜಿ ಹಾಗೂ ಎಕ್ಸೈಟ್‌ಮೆಂಟ್‌ನಿಂದ ಕೂಡಿದೆ. ಅಲ್ದೆ ಆಗಸ್ಟ್‌ 23 ಅಂದ್ರೆ ನಾಳೆ ಸಂಜೆ ವಿಕ್ರಮ್‌ ಲ್ಯಾಂಡರ್‌ನ ಲ್ಯಾಂಡಿಂಗ್‌ ಕಾರ್ಯಾಚರಣೆಯ ನೇರಪ್ರಸಾರವನ್ನ MOX/ISTRAC ಸಂಜೆ 5.20ರಿಂದ ಆರಂಭವಾಗಲಿದೆ ಅಂತ ಇಸ್ರೋ ಮಾಹಿತಿ ನೀಡಿದೆ. ಇದರ ಜೊತೆಗೆ ಆಗಸ್ಟ್‌ 19ರಂದು ಲ್ಯಾಂಡರ್ ಪೊಸಿಷನ್ ಡೆಟೆಕ್ಷನ್ ಕ್ಯಾಮೆರಾ (LPDC ) ಸುಮಾರು 70 ಕಿಲೋಮೀಟರ್‌ ಎತ್ತರದಿಂದ ತೆಗೆದ ಚಂದ್ರನ ಕೆಲವು ಫೋಟೋಗಳನ್ನ ಹೊಂದಿರುವ ವಿಡಿಯೋ ಒಂದನ್ನ ಇಸ್ರೋ ಶೇರ್‌ ಮಾಡಿದೆ. ಇನ್ನೊಂದ್‌ ಕಡೆ ಚಂದ್ರಯಾನ-3 ಯಶಸ್ವಿಯಾಗಲಿ ಅಂತ ಪ್ರಾರ್ಥಿಸಿ ದೇಶಾದ್ಯಂತ ಹಲವು ದೇವಸ್ಥಾನಗಳಲ್ಲಿ ಹೋಮ, ಹವನಗಳನ್ನ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply