ಚೀತಾ ಸಾವು ನೈಸರ್ಗಿಕ: ಕೇಂದ್ರ ಸರ್ಕಾರ

masthmagaa.com:

ಆಫ್ರಿಕಾ ದೇಶಗಳಿಂದ ಕರೆತಂದು ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಇರಿಸಲಾಗಿರುವ 20 ಚೀತಾಗಳ ಪೈಕಿ 8 ಚೀತಾಗಳು ಈವರೆಗೆ ಸಾವನ್ನಪ್ಪಿವೆ. ಚೀತಾಗಳ ಸರಣಿ ಸಾವಿಗೆ ಅವುಗಳ ನಿರ್ವಹಣೆ ಹಾಗೂ ರೇಡಿಯೋ ಕಾಲರ್‌ ಕಾರಣ ಅನ್ನೊ ಆರೋಪಗಳು ಕೇಳಿ ಬಂದಿದ್ದವು. ಇದೀಗ ಈ ಆರೋಪಗಳನ್ನ ತಳ್ಳಿಹಾಕಿರುವ ಕೇಂದ್ರ ಸರ್ಕಾರ, ನೈಸರ್ಗಿಕ ಕಾರಣಗಳಿಂದ ಚೀತಾಗಳು ಮೃತಪಟ್ಟಿವೆ ಅಂತ ಹೇಳಿದೆ. ಅಲ್ದೆ ಚೀತಾಗಳ ಸಾವಿನ ನಿಖರ ಕಾರಣ ತಿಳಿಯಲು ತನಿಖೆಗಳು ನಡೆದಿವೆ. ಇದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಚೀತಾ ತಜ್ಞರು ಹಾಗೂ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾ ದೇಶಗಳ ಪಶು ವೈದ್ಯರ ಜೊತೆಗೂ ಚರ್ಚೆ ನಡೆಸಲಾಗಿದೆ. ಚೀತಾಗಳ ಸಂರಕ್ಷಣೆಗೆ ಅನುಸರಿಸಬೇಕಾದ ನಿಯಮಗಳು, ಚೀತಾಗಳಿಗೆ ನೀಡಬೇಕಾದ ಸೌಲಭ್ಯಗಳು ಸೇರಿದಂತೆ ಹಲವು ಮಾಹಿತಿಗಳನ್ನ ಸಂಗ್ರಹಿಸಲಾಗಿದೆ. ಜೊತೆಗೆ ಇದಕ್ಕಾಗಿ ಸೂಕ್ತ ತರಬೇತಿಯನ್ನೂ ನೀಡಲಾಗಿದೆ. ಪ್ರಾಜೆಕ್ಟ್‌ ಚೀತಾ ಸಮಿತಿಯು ಚೀತಾಗಳ ನಿರ್ವಹಣೆ ಮೇಲೆ ನಿಗಾ ವಹಿಸಿದೆ ಅಂತ ಕೇಂದ್ರ ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply