ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಾಗಿ PS ದಿನೇಶ್‌ ಕುಮಾರ್‌!

masthmagaa.com:

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ PS ದಿನೇಶ್‌ ಕುಮಾರ್‌ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ಫೆಬ್ರವರಿ 24ಕ್ಕೆ ನಿವೃತ್ತಿಗೊಳ್ಳಲಿರೋ ನ್ಯಾಯಮೂರ್ತಿ ದಿನೇಶ್‌ ಕುಮಾರ್‌, 21 ದಿನಗಳ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಈ ಹಿಂದೆ ಚೀಫ್‌ ಜಸ್ಟೀಸ್‌ ಆಗಿದ್ದ ಪ್ರಸನ್ನ ಬಿ ವರಾಳೆ ಸುಪ್ರಿಂ ಕೋರ್ಟ್‌ ಜಡ್ಜ್‌ ಆಗಿ ಪದೋನ್ನತಿ ಆಗಿದ್ರಿಂದ, ಅವರ ಸ್ಥಾನಕ್ಕೆ ನ್ಯಾಯಾಧೀಶ ದಿನೇಶ್‌ ಕುಮಾರ್‌ ಬಂದಿದ್ದಾರೆ. ಇನ್ನೊಂದೆಡೆ ಚುನಾವಣೆ ವೇಳೆ ಮತದಾರರಿಗೆ ಗ್ಯಾರಂಟಿ ಭಾಗ್ಯಗಳ ಆಮಿಷ ಒಡ್ಡೋ ರಾಜಕೀಯ ಪಕ್ಷಗಳ ವಿರುದ್ದ ಕಠಿಣ ಕ್ರಮ ತಗೊಳ್ಳಿ ಅಂತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದ ನಿಯೋಗ ಈ ಮನವಿ ಸಲ್ಲಿಸಿತ್ತು. ಇದೀಗ ಈ ಮನವಿಯನ್ನ ಪುರಸ್ಕರಿಸಿರೋ ಕೋರ್ಟ್, ಮುಖ್ಯ ಚುನಾವಣಾ ಆಯುಕ್ತರು ಹಾಗೂ ಕೇಂದ್ರ ಕಾನೂನು ಸಚಿವರಿಗೆ ನೋಟಿಸ್‌ ನೀಡಿದೆ. ಅಲ್ದೇ ಈ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸೋಕೆ ಪ್ರತಿವಾದಿಗಳಿಗೆ ಸೂಚಿಸಿ, ವಿಚಾರಣೆಯನ್ನ ಮಾರ್ಚ್‌ 11ಕ್ಕೆ ಮುಂದೂಡಿದೆ.

-masthmagaa.com

Contact Us for Advertisement

Leave a Reply