ಮಯನ್ಮಾರ್‌ ಗಲಭೆಗೆ ಚೀನಾ ಮಧ್ಯಸ್ಥಿಕೆಯಲ್ಲಿ ಬ್ರೇಕ್!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಮಯನ್ಮಾರ್‌ನ ಜುಂಟಾ ಆರ್ಮಿ ಹಾಗೂ ಬಂಡುಕೋರರ ಮಧ್ಯೆ ಸೀಜ್‌ ಫೈರ್‌ ಅಗಿದೆ. ವಿಶೇಷ ಅಂದ್ರೆ ಇವರಿಬ್ರ ಮಧ್ಯೆ ಬ್ರೋಕರ್‌ ಕೆಲಸ ಮಾಡಿದ್ದು ಪಕ್ಕದ ಚೀನಾ. ಜನವರಿ 10, 11ರಂದು ಚೀನಾದ ಕುನ್‌ಮಿಂಗ್‌ ನಗರದಲ್ಲಿ ಈ ಒಪ್ಪಂದ ಏರ್ಪಟ್ಟಿತ್ತು. ಚೀನಾ ಸಹಾಯದಿಂದ ನಾವು ಸೀಜ್‌ ಫೈರ್‌ ಅಗ್ರೀಮೆಂಟ್‌ಗೆ ಒಪ್ಪಿದ್ದೇವೆ. ಅಲ್ದೇ ಚೀನಾ ಜೊತೆ ವ್ಯಾಪಾರ, ವ್ಯವಹಾರ ನಡೆಸೋಕೆ ಬಾರ್ಡರ್‌ ಓಪನ್‌ ಮಾಡಲಾಗುತ್ತೆʼ ಅಂತ ಮಯನ್ಮಾರ್‌ ಸೇನಾ ಸರ್ಕಾರದ ವಕ್ತಾರ ಜಾವ್‌ ಮಿನ್‌ ಟುನ್‌ ಹೇಳಿದ್ದಾರೆ. ಅಲ್ದೇ ಚೀನಾ ವಿದೇಶಾಂಗ ವಕ್ತಾರೆ ಮಾವೊ ನಿಂಗ್ ಮಾತನಾಡಿ, ʻಇಮೀಡಿಯೇಟ್‌ ಆಗಿ ಕದನವಿರಾಮ ತರೋಕೆ ಎರಡೂ ಗುಂಪುಗಳು ಒಪ್ಪಿಗೆ ನೀಡಿವೆ. ಅಲ್ಲದೆ ಮಾತುಕತೆ ಮೂಲಕ ವಿವಾದಗಳನ್ನ ಬಗೆಹರಿಸಿಕೊಳ್ಳುತ್ವೆʼ ಅಂತೇಳಿದ್ದಾರೆ. ಅಂದ್ಹಾಗೆ ಚೀನಾದ ಬಾರ್ಡರ್‌ನಲ್ಲೇ ಈ ಬಂಡುಕೋರರು ಮತ್ತು ಜುಂಟಾ ನಡುವೆ ಜಗಳ ನಡೀತಿತ್ತು. ಹೀಗಾಗಿ ತನಗೆ ತೊಂದ್ರೆ ಆಗುತ್ತೆ ಅಂತೇಳಿ ಚೀನಾ ತಾನೇ ಮುತುವರ್ಜಿ ವಹಿಸಿ ಸೀಜ್‌ ಫಯರ್‌ ಘೋಷಣೆ ಆಗೋ ರೀತಿ ನೋಡ್ಕೊಂಡಿದೆ. ಜೊತೆಗೆ ಮಯನ್ಮಾರ್‌ನಲ್ಲಿ ತನ್ನ ಪ್ರಭಾವವನ್ನ ಹೆಚ್ಚು ಮಾಡಿಕೊಳ್ಳೋಕೂ ಚೀನಾ ಪ್ರಯತ್ನ ಮಾಡ್ತಾ ಇದ್ದು ಈ ನಿಟ್ಟಿನಲ್ಲಿ ಈ ಬೆಳವಣಿಗೆ ಚೀನಾಗೆ ದೊಡ್ಡ ಗೆಲುವು ಅಂತಲೇ ವಿಶ್ಲೇಷಣೆ ಮಾಡಲಾಗ್ತಿದೆ. ಇನ್ನು ಇದು ಎಲ್ಲೋ ಒಂದು ಕಡೆ ಭಾರತಕ್ಕೆ ತಲೆನೋವು ತರುವ ಸಾಧ್ಯತೆ ಇದೆ. ಯಾಕಂದ್ರೆ ಚೀನಾ ಈಗಾಗಲೇ ಮಯನ್ಮಾರ್‌ನ್ನ ಭಾರತದ ವಿರುದ್ದ ಬಳಸಿಕೊಳ್ಳೋಕೆ ಹೊಂಚುಹಾಕೊಂಡು ಕೂತಿದೆ. ಅಂಡಮಾನ್‌ ಸಮೀಪ ಮಯನ್ಮಾರ್‌ನ ಕೊಕೊ ದ್ವೀಪಗಳ ಮೂಲಕ ಭಾರತಕ್ಕೆ ತಲೆನೋವು ತರೋಕೆ ಚೀನಾ ಯೋಜಿಸ್ತಿದೆ. ಈ ಎಲ್ಲಾ ಕಾರಣದಿಂದ ಈ ಸೀಜ್‌ ಫೈರ್‌ ಮಹತ್ವ ಪಡ್ಕೋತಿದೆ.

-masthmagaa.com

Contact Us for Advertisement

Leave a Reply