ಕೋವಿಡ್‌ ಲಾಕ್‌ಡೌನ್‌ ಪ್ರಭಾವ, ಚೀನಾದಲ್ಲಿ ಮದುವೆಯಾಗೋರೆ ಇಲ್ಲ!

masthmagaa.com:

ಜನಸಂಖ್ಯೆಯಲ್ಲಿ ಇತ್ತೀಚೆಗಷ್ಟೇ ಪಟ್ಟಬಿಟ್ಟುಕೊಟ್ಟ ಚೀನಾದಲ್ಲಿ ದಿಢೀರ್‌ ಮದುವೆಯಾಗೋರ ಸಂಖ್ಯೆ ಕಡಿಮೆಯಾಗಿದೆ ಅಂತ ವರದಿಯಾಗಿದೆ. ಮದುವೆಗಳ ಲೆಕ್ಕ ಇಡೋಕೆ ಶುರುವಾದಾಗಿನಿಂದ ಇದೇ ಮೊದಲಬಾರಿಗೆ 2022ರಲ್ಲಿ ಅತ್ಯಂತ ಕಡಿಮೆ ಮದುವೆಗಳು ದಾಖಲಾಗಿವೆ ಅಂತ ಯಿಕೈ ಅನ್ನೋ ಚೀನಾದ ಮಾಧ್ಯಮ ವರದಿ ಮಾಡಿದೆ. ಚೀನಾದ ನಾಗರಿಕ ವ್ಯವಹಾರಗಳ ಇಲಾಖೆ ಅಂಕಿ-ಅಂಶಗಳ ಪ್ರಕಾರ ಕಳೆದ ವರ್ಷ ಕೇವಲ 68.3 ಲಕ್ಷ ಜನ ಮುವೆಯಾಗಿದ್ದಾರೆ, ಇದು ಅದ್ರ ಹಿಂದಿನ ವರ್ಷಕ್ಕಿಂತ 8 ಲಕ್ಷ ಕಡಿಮೆ. ಕೋವಿಡ್‌ ಲಾಕ್‌ಡೌನ್‌ ಬೆನ್ನಲ್ಲೇ ಮದುವೆಗಳ ಸಂಖ್ಯೆ ಕುಸಿದಿದೆ ಎನ್ನಲಾಗಿದೆ. ಅಂದ್ಹಾಗೆ ಕಳೆದ ವರ್ಷ ಚೀನಾದಲ್ಲಿ 6 ದಶಕಗಳಲ್ಲೇ ಮೊದಲ ಬಾರಿಗೆ ಜನಸಂಖ್ಯೆ ಕೂಡ ಕುಸಿದಿತ್ತು. ಜನನ ಪ್ರಮಾಣ ಕೂಡ ವ್ಯಾಪಕವಾಗಿ ಕಮ್ಮಿಯಾಗಿತ್ತು.

-masthmagaa.com

Contact Us for Advertisement

Leave a Reply