ಹೊಸ ವರ್ಷಕ್ಕೆ ಚೀನಾ – ಉತ್ತರ ಕೊರಿಯಾ ಫ್ರೆಂಡ್‌ಶಿಪ್‌ ಪ್ಲಾನ್ಸ್‌!

masthmagaa.com:

ರಷ್ಯಾ ಮತ್ತು ಉತ್ತರ ಕೊರಿಯಾ ಇನ್ನಷ್ಟು ಕ್ಲೋಸ್‌ ಆಗ್ತಿರೋ ಟೈಮ್‌ನಲ್ಲಿ ಇದೀಗ, ಚೀನಾ ಮತ್ತು ನಾರ್ತ್‌ ಕೊರಿಯಾ ಹೊಸ ವರ್ಷಕ್ಕೆ ಹೊಸ ಪ್ಲಾನ್ ಹಾಕೊಂಡಿವೆ. 2024 ಚೀನಾ ಮತ್ತು ನಾರ್ತ್‌ ಕೊರಿಯಾದ ʻಫ್ರೆಂಡ್‌ಶಿಪ್‌ ಇಯರ್‌ʼ ಅಂತ ಈ ಎರಡು ಮಿತ್ರ ರಾಷ್ಟ್ರಗಳು ಜನವರಿ 1 ರಂದು ಒಟ್ಟಿಗೆ ಅನೌನ್ಸ್‌ ಮಾಡಿವೆ. ಜೊತೆಗೆ ಹಲವಾರು ಚಟುವಟಿಕೆಗಳನ್ನ ಕೂಡ ಲಾಂಚ್‌ ಮಾಡಿವೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ನಾರ್ತ್‌ ಕೊರಿಯಾ ನಾಯಕ ಕಿಮ್‌ ಜಾಂಗ್‌ ಉನ್‌ ಹೊಸ ವರ್ಷಕ್ಕೆ ಶುಭಾಶಯ ತಿಳಿಸೋ ವೇಳೆ ತಮ್ಮ ಪ್ಲಾನ್ಸ್‌ ಹೇಳ್ಕೊಂಡಿದ್ದಾರೆ. ಹೊಸ ವರ್ಷದಲ್ಲಿ ಉಭಯ ದೇಶಗಳು ಒಟ್ಟಾಗಿ ಹಲವಾರು ಈವೆಂಟ್‌ಗಳನ್ನ ಆಯೋಜಿಸಲಿದ್ದಾರೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply