ಚೀನಾಗಿರೋ ಏಕೈಕ ಭಯ ಅಂದ್ರೆ ಭಾರತ! ಯಾಕೆ?

masthmagaa.com:

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಪ್ರಭಾವವನ್ನ ಕಡಿಮೆ ಮಾಡೋಕೆ ಚೀನಾ ತುಂಬಾ ಪ್ರಯತ್ನ ಪಡ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವ್ರು ಭಾಗವಹಿಸಿದ್ದ ರಾಷ್ಟ್ರೀಯ ಭದ್ರತಾ ಸಭೆಯಲ್ಲಿ ಹಿರಿಯ ಐಪಿಎಸ್‌ ಅಧಿಕಾರಿಗಳು ಈ ಬಗ್ಗೆ ವರದಿ ನೀಡಿದ್ದಾರೆ. ಚೀನಾ ಆಗ್ನೇಯ ಮತ್ತು ದಕ್ಷಿಣ ಏಷ್ಯಾ ದೇಶಗಳ ಅಭಿವೃದ್ಧಿಗೆ ಅಂತ ನಾಟಕ ಆಡಿ ಲೋನ್‌ ಹೆಸರಿನಲ್ಲಿ ಹಣ ಒದಗಿಸುತ್ತಿದೆ. ಅಲ್ದೇ ಬೆಲ್ಟ್‌ ಅಂಡ್‌ ರೋಡ್‌ ಇನಿಷಿಯೇಟಿವ್ ಮತ್ತು ಚೀನಾ-ಪಾಕಿಸ್ತಾನ ಎಕನಾಮಿಕ್‌ ಕಾರಿಡಾರ್‌ ಹೆಸರಲ್ಲಿ ಅನೇಕ ಮೂಲಸೌಕರ್ಯ ನಿರ್ಮಿಸುತ್ತಾ ಇದೆ. ಈ ಮೂಲಕ ತನ್ನ ಆರ್ಥಿಕ ನೀತಿಗಳ ಹೆಸರಲ್ಲಿ ದಕ್ಷಿಣ ಏಷ್ಯಾದ ದೇಶಗಳಲ್ಲಿ ತನ್ನ ಉಪಸ್ಥಿತಿಯನ್ನ ಹೆಚ್ಚಿಸಿಕೊಂಡು ಭಾರತದ ಪ್ರಭಾವ ಕಡಿಮೆಗೊಳಿಸೋಕೆ ಪ್ರಯತ್ನ ಪಡ್ತಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ.

-masthmagaa.com

Contact Us for Advertisement

Leave a Reply