ಇಂಡೋ-ಚೀನಾ ಗಡಿಗೆ 10 ಸಾವಿರ ಸೈನಿಕರು! ಭಾರತಕ್ಕೆ ಚೀನಾದಿಂದ ಎಚ್ಚರಿಕೆ!

masthmagaa.com:

ಭಾರತ – ಚೀನಾ ನಡುವೆ ಉದ್ವಿಗ್ನತೆ ಮತ್ತೊಂದು ಹಂತ ತಲುಪಿದೆ. ಭಾರತ, ಚೀನಾ ಗಡಿಗೆ ಹೆಚ್ಚುವರಿಯಾಗಿ ಸುಮಾರು 10 ಸಾವಿರ ಸೈನಿಕರನ್ನ ನಿಯೋಜಿಸೋಕೆ ಪ್ಲಾನ್‌ ಹಾಕಿದೆ. ಇದೀಗ ಈ ವಿಷಯ ಡ್ರ್ಯಾಗನ್‌ ಕಿವಿಗೆ ಬೀಳ್ತಿದ್ಹಾಗೆ ಭಾರತದ ವಿರುದ್ದ ಕಿಡಿಕಾರಿದೆ. ಭಾರತಕ್ಕೆ ಧಮ್ಕಿ ಹಾಕಿದೆ.ʻʻಗಡಿಯಲ್ಲಿ ಭಾರತೀಯ ಸೇನಾ ಪಡೆಯನ್ನ ಹೆಚ್ಚು ಮಾಡೋದ್ರಿಂದ ಅಲ್ಲಿನ ಉದ್ವಿಗ್ನತೆ ಕಡಿಮೆಯಾಗೋದಿಲ್ಲ….ಸಿಚುವೇಶನ್‌ ಇನ್ನೂ ಕಷ್ಟ ಆಗುತ್ತೆ ಅಂತ ಹೇಳಿದೆ. ಹೀಗಂತ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್‌ ವಾರ್ನ್‌ ಮಾಡಿದ್ದಾರೆ. ʻಭಾರತ-ಚೀನಾ ಗಡಿಯಲ್ಲಿ ಹೆಚ್ಚು ಭಾರತೀಯ ಸೈನಿಕರನ್ನ ನಿಯೋಜಿಸೋದ್ರಿಂದ, ಆ ಏರಿಯಾದ ಪರಿಸ್ಥಿತಿಯನ್ನ ಸರಿಮಾಡೋಕಾಗಲ್ಲ. ಅಥ್ವಾ ಅಲ್ಲಿ ಶಾಂತಿ ಮತ್ತು ಸೇಫ್ಟಿಯನ್ನ ಕಾಪಾಡೋಕಾಗಲ್ಲ ಅಂತ ಹೇಳಿದ್ದಾರೆ ಇದೇ ವೇಳೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನ ಕಾಪಾಡಲು ಭಾರತ ಜೊತೆ ಕೆಲಸ ಮಾಡೋಕೆ ಚೀನಾ ಬದ್ಧವಾಗಿದೆʼ ಅಂತಲೂ ಇನ್ನೊಂದು ಮಾತು ಸೇರಿಸಿದ್ದಾರೆ.

ಇನ್ನೊಂದ್ಕಡೆ ಪಿಎಂ ನರೇಂದ್ರ ಮೋದಿವ್ರು ಇದೀಗ ಅರುಣಾಚಲ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಭಾರತದ ಅತೀ ಉದ್ದದ ಸೆಲಾ ಟನೆಲ್‌ನ್ನ ಮೋದಿಯವ್ರು ಅರುಣಾಚಲ ಪ್ರದೇಶದಲ್ಲಿ ಉದ್ಘಾಟಿಸಿದ್ದಾರೆ. ಸುಮಾರು 13,000 ಅಡಿ ಎತ್ತರದಲ್ಲಿರೋ ಟನೆಲ್‌ ಇದಾಗಿದ್ದು, ಒಟ್ಟು 825 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಚೀನಾ ಗಡಿಭಾಗದಲ್ಲೇ ಈ ನೂತನ ಟನೆಲ್‌ ನಿರ್ಮಿಸಲಾಗಿದ್ದು…ಸಾಕಷ್ಟು ಮಹತ್ವವನ್ನ ಹೊಂದಿದೆ. 2019ರಲ್ಲಿ ಇದಕ್ಕೆ ಫೌಂಡೇಶನ್‌ ಹಾಕಲಾಗಿತ್ತು. ಈಗ ಅದನ್ನ ಉದ್ಘಾಟನೆ ಮಾಡಲಾಗಿದೆ. ಅಂದ್ಹಾಗೆ ಸದಾ ಭಾರತದ ಅರುಣಾಚಲ ಪ್ರದೇಶವನ್ನ ನಮ್ಮದು ನಮ್ಮದು ಅಂತ ಬಾಯಿ ಬಡ್ಕೊಳೋ ಚೀನಾ ಸಾಕಷ್ಟು ಸಲ ಭಾರತದ ಯಾವುದೇ ಉನ್ನತ ನಾಯಕರು ಅರುಣಾಚಲಕ್ಕೆ ಭೇಟಿ ಕೊಟ್ಟಾಗ ಅದನ್ನ ವಿರೋಧ ಮಾಡುತ್ತೆ. ಇದರ ನಡುವೆಯೂ ಅದರಲ್ಲೂ ಈಗ ಚೀನಾ ಜೊತೆಗೆ ಉದ್ವಿಗ್ನತೆ ಜಾಸ್ತಿ ಅಗ್ತಿರೋದ್ರ ನಡುವೆಯೂ ಚೀನಾಗೆ ಹೊಂದಿಕೊಂಡಿರೋ ಅರುಣಾಚಲಕ್ಕೆ ಭೇಟಿ ಕೊಟ್ಟಿರೋದು ಮಹತ್ವ ಪಡ್ಕೊಳ್ಳುತ್ತೆ. ಜೊತೆಗೆ ಈ ಟನಲ್‌ ಇರೋ ಈ ಪ್ರದೇಶ ಈ ಹಿಂದೆ 1962ರಲ್ಲಿ ಚೀನಾ ಜೊತೆಗಿನ ಯುದ್ದದಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

-masthmagaa.com

Contact Us for Advertisement

Leave a Reply