ಅಧ್ಯಕ್ಷೀಯ ಚುನಾವಣೆಗೆ ತಲೆಹಾಕಲ್ಲ! ಅಮೆರಿಕಕ್ಕೆ ಮಾತು ಕೊಟ್ಟ ಚೀನಾ!

masthmagaa.com:

ಅಮೆರಿಕ ಅಧ್ಯಕ್ಷೀಯ ಚುನಾವಣೆ ಹತ್ರವಾಗ್ತಿದ್ದು, ಸರಿಯಾದ ಅಭ್ಯರ್ಥಿಯ ಆಯ್ಕೆಗೆ ರೇಸ್‌ ನಡೀತಿದೆ. ಈ ಮಧ್ಯೆ ಇದೀಗ ಚೀನಾ, ತಾನು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತಲೆ ಹಾಕಲ್ಲ ಅಂತ ಹೇಳಿದೆಯಂತೆ. ಈ ಹಿಂದೆ 2023ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌, ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಈ ರೀತಿ ಮಾತು ಕೊಟ್ಟಿದ್ರು. ಇದೀಗ ಜನವರಿ 28 ರಂದು ಅಮೆರಿಕದ ಭದ್ರತಾ ಸಲಹೆಗಾರ ಜೇಕ್‌ ಸುಲ್ಲಿವನ್‌ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಅವ್ರು ಥೈಲ್ಯಾಂಡ್‌ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ರು. ಈ ವೇಳೆ ವಾಂಗ್‌ ಯಿ, ಕಳೆದ ವರ್ಷ ತಮ್ಮ ಅಧ್ಯಕ್ಷ ಕೊಟ್ಟ ಮಾತನ್ನ ಒತ್ತಿಹೇಳಿದ್ದಾರೆ. ಈ ಮೂಲಕ ಅಮೆರಿಕದ ಚುನಾವಣೆಯಲ್ಲಿ ಚೀನಾ ಹಸ್ತಕ್ಷೇಪ ಮಾಡಲ್ಲ ಅಂತ ಫುಲ್‌ ಗ್ಯಾರಂಟಿ ಕೊಟ್ಟಿದ್ದಾರೆ. ಅಂದ್ಹಾಗೆ ವಿಶ್ವದ ಪವರ್‌ ಸೆಂಟರ್‌ ಆಗಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬೇರೆ ರಾಷ್ಟ್ರಗಳು ಮೂಗು ತೂರಿಸೋದು ಹೊಸದೇನಲ್ಲ. ಈ ಹಿಂದೆ ರಷ್ಯಾ ಸಾಕಷ್ಟು ಬಾರಿ ಈ ರೀತಿ ಮಾಡಿತ್ತು ಅನ್ನೋ ಆರೋಪ ಇದೆ. ಆದ್ರಿಂದ ಚೀನಾ ಕಡೆಯಿಂದ ಬಂದ ಈ ಕನ್ಫರ್ಮೇಷನ್‌ ಅಮೆರಿಕಕ್ಕೆ ಸ್ವಲ್ಪ ಸಮಾಧಾನ ತಂದಿದೆ.

-masthmagaa.com

Contact Us for Advertisement

Leave a Reply