ಚೀನಾ ಸೈನಿಕರಿಗೂ ಎಂಟ್ರಿ ಇಲ್ಲ: ಮಾಲ್ಡೀವ್ಸ್‌ ಭಾವಿ ಅಧ್ಯಕ್ಷ

masthmagaa.com:

ದ್ವೀಪರಾಷ್ಟ್ರ ಮಾಲ್ಡೀವ್ಸ್‌ನಲ್ಲಿರೊ ಭಾರತೀಯ ಸೈನಿಕರು ವಾಪಸ್‌ ಹೋದ್ಮೇಲೆ ಆ ಜಾಗಕ್ಕೆ ಚೀನಾ ಪಡೆಗಳು ಬರೋದಿಲ್ಲ ಅಂತ ಅಲ್ಲಿನ ಭಾವಿ ರಾಷ್ಟಪತಿ ಮೊಹಮದ್‌ ಮುಯ್ಜು ಹೇಳಿದ್ದಾರೆ. ಈ ವಾರದ ಕೊನೆಯಲ್ಲಿ ತಾನು ಅಧಿಕಾರ ಕೈಗೆತ್ತುಕೊಳ್ತಿದ್ದ ಹಾಗೆ ಭಾರತೀಯ ಸೈನಿಕರು ಮಾಲ್ಡೀವ್ಸ್‌ ಬಿಟ್ಟೋಗ್ಬೇಕು ಅಂತ ಮುಯ್ಜು ಹೇಳಿದ್ರು. ಈ ಬಗ್ಗೆ ಮಾತಾಡಿರುವ ಮುಯ್ಜು “ನಾವು ಭಾರತ, ಚೀನಾ ಸೇರಿದಂತೆ ಎಲ್ಲಾ ದೇಶಗಳ ಜೊತೆ ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ. ಒಳ್ಳೆ ಸಂಬಂಧವನ್ನ ಹೊಂದೊ ಉದ್ದೇಶ ಇದೆ. ಭಾರತೀಯ ಸೇನೆ ಹೋದ್ಮೇಲೆ ಚೀನಾ ಸೇನೆಗೆ ಜಾಗ ಕೊಡಲ್ಲ. ಯಾಕಂದ್ರೆ ವಿದೇಶಿ ಸೇನೆಗೆ ಜಾಗ ಕೊಡ್ಲಿ ಅಂತ ಮಾಲ್ಡೀವ್ಸ್‌ ಜನ ನಂಗೆ ವೋಟ್‌ ಹಾಕಿಲ್ಲ. ಮಾಲ್ಡೀವ್ಸ್‌ ಸಣ್ಣ ರಾಷ್ಟ್ರ. ಬೇರೆ ದೇಶಗಳ ಜಿಯೋಪೊಲಿಟಿಕಲ್‌ ಪೈಪೋಟಿಗೆ ನಾವು ವೇದಿಕೆ ಕಲ್ಪಿಸಲ್ಲ.” ಅಂತೇಳಿದ್ದಾರೆ. ಅಂದ್ಹಾಗೆ 45 ವರ್ಷದ ಮೊಹಮದ್‌ ಮುಯ್ಜು ನವೆಂಬರ್‌ 17ರಂದು ಮಾಲ್ಡೀವ್ಸ್‌ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

-masthmagaa.com

Contact Us for Advertisement

Leave a Reply