ಬಂಗಾಳ ಕೊಲ್ಲಿಯಲ್ಲಿ ಭಾರತ-ಜಪಾನ್‌ ಕೋಸ್ಟ್‌ ಗಾರ್ಡ್‌ಗಳಿಂದ ಡ್ರಿಲ್‌!

masthmagaa.com:

ಚೆನೈ ಬಳಿಯ ಭಾರತೀಯ ಕೋಸ್ಟ್‌ ಗಾರ್ಡ್‌ ಮತ್ತು ಜಪಾನ್‌ ಕೋಸ್ಟ್‌ ಗಾರ್ಡ್‌ ಜಂಟಿ ಸಮರಾಭ್ಯಾಸ ನಡೆಸಿವೆ. ಜನವರಿ 8 ರಿಂದ ಪ್ರಾರಂಭವಾಗಿದ್ದ ಈ ಸಮರಾಭ್ಯಾಸ ಶನಿವಾರ ಮುಕ್ತಾಯಗೊಂಡಿದೆ. ಇದ್ರಲ್ಲಿ ಸಮುದ್ರ ಮಾಲಿನ್ಯವನ್ನ ತಡೆಗಟ್ಟೋ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಅಂದ್ಹಾಗೆ 2006ರಲ್ಲಿ ಈ ರೀತಿಯ ಸಮರಾಭ್ಯಾಸ, ಟ್ರೈನಿಂಗ್‌, ವರ್ಕ್‌ಶಾಪ್‌ಗಳನ್ನ ಆಯೋಜಿಸಿ, ಉಭಯ ದೇಶಗಳ ಮಧ್ಯೆ ಇಂಟರ‍್ಯಾಕ್ಷನ್‌ ಹೆಚ್ಚಿಸೋ ಬಗ್ಗೆ ಅಗ್ರೀಮೆಂಟ್‌ ಮಾಡಲಾಗಿದೆ. ಇದರ ಅಂಗವಾಗಿ ಇದೀಗ ಸಮರಾಭ್ಯಾಸ ನಡೆಸಲಾಗಿದೆ.

-masthmagaa.com

Contact Us for Advertisement

Leave a Reply