ಬ್ರಿಟನ್‌ ಸಂಸದರ ಜೊತೆ ರಾಹುಲ್‌ ಪೋಟೋ! ಕಾಂಗ್ರೆಸ್‌ – ಬಿಜೆಪಿ ನಡವೆ ಟ್ವೀಟ್‌ ವಾರ್‌ ಜೋರು

masthmagaa.com:

ಯುನೈಟೆಡ್‌ ಕಿಂಗ್ಡಮ್‌ನ ಸಂಸದರೊಬ್ಬರ ಜೊತೆಗಿನ ರಾಹುಲ್‌ ಪೋಟೋ ದೇಶದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ಮತ್ತೊಂದು ಸುತ್ತಿನ ಟ್ವೀಟ್‌ ವಾರ್‌ಗೆ ಕಾರಣವಾಗಿದೆ. ಮೊನ್ನೆಯಷ್ಟೇ ಲಂಡನ್‌ ಪ್ರವಾಸ ಕೈಗೊಂಡಿದ್ದ ರಾಹುಲ್‌ ಗಾಂಧಿ ಈ ವೇಳೆ ಅಲ್ಲಿನ ಲೇಬರ್‌ ಪಕ್ಷದ ನಾಯಕ, ಸಂಸದ ಜರಿಮಿ ಕೊಬಿನ್‌ ಅವರನ್ನ ಭೇಟಿಯಾಗಿದ್ರು. ಅಷ್ಟಕ್ಕೂ ಈ ಜರಿಮಿ ಕೊಬಿನ್‌ ಅಲ್ಲಿನ ಎಡಪಂಥೀಯ ಪಕ್ಷ ಲೇಬರ್‌ ಪಾರ್ಟಿಯ ನಾಯಕರಾಗಿದ್ದು ಕಾಶ್ಮೀರ ವಿಚಾರದಲ್ಲಿ ಭಾರತ ವಿರೋಧಿ ಹೇಳಿಕೆ ನೀಡ್ತಾನೇ ಬಂದಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಅಲ್ಲಿನ ಪ್ರತ್ಯೇಕತಾ ಹೋರಾಟಗಾರರ ಪರವಾಗಿ ಹಾಗೂ ಪಾಕ್‌ ಪರವಾಗಿ ಓಪನ್‌ ಆಗಿಯೇ ಮಾತನಾಡ್ತಾರೆ. ಅವರಿಗೆ ಬೆಂಬಲ ಕೊಡ್ತಾರೆ ಅನ್ನೋ ಬಲವಾದ ಆರೋಪ ಕೂಡ ಇದೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡಿದ್ದ ಕಮಲಪಡೆ, ರಾಹುಲ್‌ಗಾಂಧಿ ಕೊಬಿನ್‌ ಬಳಿ ಹೋಗುವ ಮೂಲಕ ಅವರ ಭಾರತ ವಿರೋಧಿ ಅಭಿಪ್ರಾಯಗಳನ್ನ ಒಪ್ಪಿಕೊಂಡಿದ್ದಾರಾ? ಅಂತ ತೀವ್ರ ವಾಗ್ದಾಳಿ ನಡೆಸಿದೆ. ಕಾನೂನು ಸಚಿವ ಕಿರಣ್‌ ರಿಜಿಜು, ಜರಿಮಿ ಅವರ ಜೊತೆಗಿದ್ದ ರಾಹುಲ್‌ ಪೋಟೋವನ್ನ ಶೇರ್‌ ಮಾಡಿ ಎಷ್ಟರಮಟ್ಟಿಗೆ ಒಬ್ರು ತಮ್ಮ ದೇಶದ ವಿರುದ್ಧ ಹೋಗ್ಬಹುದ ಅಂತ ಕುಟುಕಿದ್ದಾರೆ. ಇದಕ್ಕೆ ಕೌಂಟರ್‌ ಕೊಡೋ ರೀತಿಯಲ್ಲಿ ಕಾಂಗ್ರೆಸ್‌ನ ಜೆನರಲ್‌ ಸೆಕ್ರಟ್ರಿ ರಣದೀಪ್‌ ಸರ್ಜೇವಾಲ, ಮೋದಿ ಹಾಗೂ ಜರಿಮಿ ಅವರ ಜೊತೆಗಿದ್ದ ಪೋಟೋವನ್ನ ಶೇರ್ ಮಾಡಿ, ಈಗ ಇದೇ ವ್ಯಕ್ತಿಯನ್ನ ಮೋದಿ ಯಾಕೆ ಬೇಟಿಯಾಗಿದ್ರು ಅಂತ ಎದುರೇಟು ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply