ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ನಾಯಕರು ಇವರೇ?

masthmagaa.com:

ದೇಶದಲ್ಲಿ ಮಂದಿನ ತಿಂಗಳು ನಡೆಯಲಿರೋ ರಾಷ್ಟ್ರಪತಿ ಚುನಾವಣೆ ಸಂಬಂಧಪಟ್ಟಹಾಗೆ ಎಲ್ಲಾ ಪಕ್ಷಗಳು ಅಭ್ಯರ್ಥಿಗಳ ಹುಡಕಾಟದಲ್ಲಿ ನಿರತವಾಗಿವೆ. ಇನ್ನು ಪ್ರತಿಪಕ್ಷಗಳ ಕಡೆಯಿಂದ ಬಿಜೆಪಿ ವಿರುದ್ದ ಈ ಬಾರಿ NCP ಮುಖ್ಯಸ್ಥ ಶರದ್‌ ಪವಾರ್‌ ಕಣಕ್ಕಿಳಿಯೋ ಸಾದ್ಯತೆ ಇದೆ ಅಂತ ಹೇಳಲಾಗಿದೆ. ಆದ್ರೆ ಇದಿನ್ನೂ ಅಧಿಕೃತವಾಗಿಲ್ಲ. ಕಾಂಗ್ರೆಸ್‌ ಕೂಡ ಪವಾರ್‌ಗೆ ಬೆಂಬಲ ನೀಡಬೋದು ಅಂತ ವರದಿಯಾಗಿದೆ. ಇದಕ್ಕೆ ಪುಷ್ಠಿ ನೀಡೋ ಹಾಗೆ ಕಳೆದ ಗುರುವಾರ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಶರದ್ ಪವಾರ್ ಅವ್ರನ್ನ ಮುಂಬೈಯಲ್ಲಿ ಭೇಟಿಯಾಗಿದ್ರು. ಆದ್ರೆ ಪವಾರ್‌ ಮಾತ್ರ ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಅಂತ ಮೂಲಗಳು ಹೇಳಿವೆ.ಯಾಕಂದ್ರೆ ಈ ಬಾರಿ ಕಾಂಗ್ರೆಸ್ಸೇತರ ಅಭ್ಯರ್ಥಿಯನ್ನ ಇಳಿಸಬೇಕು ಅನ್ನೋ ಲೆಕ್ಕಾಚಾರ ಕೂಡ ಇದೆ ಅಂತ ಹೇಳಲಾಗ್ತಿದೆ. ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ಕೇಳಿದ್ರ. ಇಲ್ಲ ನಾವೇ ಬೆಂಬಲ ಕೊಡ್ತೀವಿ ನೀವು ನಿಂತ್ಕೊಳ್ಳಿ ಅಂತ ಹೇಳಿದ್ರ ಒಂದೂ ಸ್ಪಷ್ಟತೆ ಇಲ್ಲ.

-masthmagaa.com

Contact Us for Advertisement

Leave a Reply