ಚೀನಾ ಮೇಲೆ ಕಣ್ಣಿಡಲು ಶ್ರೀಲಂಕಾ ಜೊತೆ ಕೈಜೋಡಿಸಿದ ಜಪಾನ್‌!

masthmagaa.com:

ಇಂಡೋ- ಪೆಸಿಫಿಕ್‌ ಭಾಗದಲ್ಲಿ ಚೀನಾ ಜೊತೆಗೆ ನೇರ ಸಂಘರ್ಷಕ್ಕಿಳಿದಿರೋ ಜಪಾನ್‌ ಈಗ ಲಂಕಾವರೆಗೂ ತಲುಪಿದೆ. ಚೀನಾಗೆ ಕೌಂಟರ್‌ ಮಾಡೋ ನಿಟ್ಟಿನಲ್ಲಿ ಚೀನಾದ ಸಾಲದ ಸುಳಿಯಲ್ಲಿ ಸಿಲುಕಿರೋ ಲಂಕಾಗೆ ನಾವು ಸಹಾಯ ಮಾಡ್ತೀವಿ ಅಂತ ಜಪಾನ್‌ ಹೇಳಿದೆ. ಶ್ರೀಲಂಕಾಗೆ ಭೇಟಿ ನೀಡಿದ್ದ ಜಪಾನ್‌ ವಿದೇಶಾಂಗ ಸಚಿವ ಯೋಶಿಮಾಸ ಹಯಾಶಿ ಈ ರೀತಿ ಲಂಕಾಗೆ ಸಹಾಯ ಮಾಡೋದಾಗಿ ಘೋಷಿಸಿದ್ದಾರೆ. ಇಂಡೋ -ಪೆಸಿಫಿಕ್‌ ಸುತ್ತ ಭದ್ರತೆ ಮತ್ತು ಆರ್ಥಿಕ ಸಹಕಾರವನ್ನ ಮುಂದುವರೆಸೋ ಗುರಿ ಹೊಂದಿದ್ದು, ಶ್ರೀಲಂಕಾ ಈಗಿನಿಂದ ನಮ್ಮ ಪ್ರಮುಖ ಪಾರ್ಟನರ್‌ ಅಂತ ಹೇಳಿದ್ದಾರೆ. ಈ ಮೂಲಕ ಚೀನಾವನ್ನ ಹಿಂದೂ ಮಹಾಸಾಗರದಲ್ಲಿ ಹಣೆಯೋ ನಿಟ್ಟಿನಲ್ಲಿ ಭಾರತದ ಪ್ರಯತ್ನಕ್ಕೆ ಈಗ ಜಪಾನ್‌ ಕೂಡ ಸೇರ್ಕೊಂಡಿದೆ. ಈಗಾಗಲೇ ಭಾರತ ಕ್ವಾಡ್‌ ದೇಶಗಳ ಜೊತೆಗೆ ಅಂದ್ರೆ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್‌ ಜೊತೆಗೆ ಚೀನಾವನ್ನ ಗುರಿಯಾಗಿಸಿಕೊಂಡು ಅನೇಕ ತಂತ್ರಗಳನ್ನ ಹೆಣೀತಾ ಇದೆ. ಹೀಗಾಗಿ ಜಪಾನ್‌ ಕೂಡ ಈ ರೀತಿ ಸಹಾಯ ಹಸ್ತ ಚಾಚಿರೋದು ಚೀನಾಗೆ ಮತ್ತೊಂದು ಹಿನ್ನಡೆ ಅಂತ ಹೇಳಲಾಗ್ತಿದೆ. ಯಾಕಂದ್ರೆ ಆರ್ಥಿಕ ಬಿಕ್ಕಟ್ಟನ್ನ ಫೇಸ್‌ ಮಾಡ್ತಿರೋ ಶ್ರೀಲಂಕಾ ಚೀನಾದ ಸಾಲದ ಬಲೆಗೆ ಬಿದ್ದು ದಿವಾಳಿ ಅಂತಲೂ ಕರೆಸಿಕೊಂಡಿದೆ. ಹೀಗಾಗಿ ಕ್ವಾಡ್‌ ದೇಶಗಳು ಶ್ರೀಲಂಕಾಗೆ ಆರ್ಥಿಕ ಸಹಾಯ ಮಾಡುವ ಮೂಲಕ ಇಂಡೋ-ಪೆಸಿಫಿಕ್‌ ರೀಜನ್‌ನಲ್ಲಿ ಚೀನಾದ ಪ್ರಾಬಲ್ಯ ಹೆಚ್ಚಾಗದಂತೆ ತಡೆಯೋಕೆ ಪ್ರಯತ್ನಿಸುತ್ತಿವೆ.

-masthmagaa.com

Contact Us for Advertisement

Leave a Reply