ಚುನಾವಣಾ ಅಭ್ಯರ್ಥಿಗಳ ಎಲ್ಲಾ ಚರಾಸ್ತಿಗಳ ವಿವರ ಅಗತ್ಯವಿಲ್ಲ: ಸುಪ್ರೀಂ

masthmagaa.com:

ಚುನಾವಣೆಯಲ್ಲಿ ಸ್ಫರ್ಧಿಸೋ ಅಭ್ಯರ್ಥಿಗಳು ತಮಗೆ ಸೇರಿರೋ ಎಲ್ಲಾ ಮೂವೇಬಲ್‌ ಪ್ರಾಪರ್ಟಿ ಅಥ್ವಾ ಚರಾಸ್ತಿಗಳ ಬಗ್ಗೆ ವಿವರಣೆ ನೀಡೋ ಅಗತ್ಯವಿಲ್ಲ ಅಂತ ಸುಪ್ರೀಂ ಆದೇಶ ಹೊರಡಿಸಿದೆ. ಅಭ್ಯರ್ಥಿಗಳು ಬೇಕಾಬಿಟ್ಟಿ ಆಸ್ತಿ ಹೊಂದಿಲ್ಲದೆ… ಐಷಾರಾಮಿ ಜೀವನಶೈಲಿ ನಡೆಸ್ತಿಲ್ಲ ಅಂದ್ರೆ ಸಾಕು, ಅವ್ರ ಹಾಗೂ ಅವ್ರ ಸಂಬಂಧಿಕರಿಗೆ ಸೇರಿದ ಎಲ್ಲಾ ಚರಾಸ್ತಿಗಳ ವಿವರಣೆ ನೀಡೋ ಅಗತ್ಯ ಇಲ್ಲ ಅಂತ ಕೋರ್ಟ್‌ ಸ್ಪರ್ಷಪಡಿಸಿದೆ. ಅಂದ್ಹಾಗೆ 2019ರಲ್ಲಿ ನಡೆದ ಅರುಣಾಚಲ ಪ್ರದೇಶದ ವಿಧಾನಸಭೆ ಚುನಾವಣೆ ವೇಳೆ ಶಾಸಕರಾದ ಕರಿಖೋ ಕ್ರಿ ಅವ್ರು ತಮ್ಮ‌ ಪತ್ನಿ ಬಳಿಯಿದ್ದ 3 ವಾಹನಗಳ ಬಗ್ಗೆ ಡಿಸ್‌ಕ್ಲೋಸ್‌ ಮಾಡಿಲ್ಲ. ಅಂದ್ರೆ ನಾಮಿನೇಷನ್‌ ಫೈಲ್‌ ಮಾಡೋವಾಗ ಹೇಳಿಕೊಂಡಿಲ್ಲ ಅಂತ ಅರ್ಜಿ ಸಲ್ಲಿಕೆಯಾಗಿತ್ತು. ಸೋ ಇದ್ರ ವಿಚಾರಣೆ ನಡೆಸಿದ ಕೋರ್ಟ್‌ ಈ ರೀತಿ ಆದೇಶ ಹೊರಡಿಸಿ ಶಾಸಕ ಕರಿಖೋ ಕ್ರಿ ಅವ್ರ ವಿರುದ್ದ ಅರ್ಜಿಯನ್ನ ವಜಾ ಮಾಡಿದೆ.

-masthmagaa.com

Contact Us for Advertisement

Leave a Reply