ಅಧಿಕಾರಕ್ಕೆ ಬಂದ್ರೆ UAPA, PMLA, CAA ಬ್ಯಾನ್:‌ CPI(M)

masthmagaa.com:

ಕೇರಳಾದಲ್ಲಿ ಅಧಿಕಾರರೂಢ CPI(M) ಪಕ್ಷ ಲೋಕಸಭಾ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದ್ರಲ್ಲಿ ಮುಖ್ಯವಾಗಿ ಕಾನೂನುಬಾಹಿರ ತಡೆ ಕಾಯ್ದೆ ಅಥ್ವಾ UAPA ಹಾಗೂ ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಥವಾ PMLA ಕಾಯ್ದೆಗಳನ್ನ ರದ್ದು ಮಾಡ್ತೀವಿ ಅಂತೇಳಿದೆ. 2019ರ ಪೌರತ್ವ ತಿದ್ದುಪಡಿ ಕಾಯ್ದೆ ಅಥ್ವಾ CAA ರದ್ದು ಮಾಡ್ತೀವಿ. ಅತಿ ಶ್ರೀಮಂತರ ಮೇಲೆ ಹೆಚ್ಚಿನ ಟ್ಯಾಕ್ಸ್‌ ಹಾಕ್ತೀವಿ. ಸಾಮಾನ್ಯ ಸಂಪತ್ತಿನ ತೆರಿಗೆ ಹಾಗೂ ಪಿತ್ರಾರ್ಜಿತ ಆಸ್ತಿ ತೆರಿಗೆ ಕಾನೂನು ತರ್ತೀವಿ ಅಂತ CPI(M) ಆಶ್ವಾಸನೆ ನೀಡಿದೆ.

-masthmagaa.com

Contact Us for Advertisement

Leave a Reply