ಫಿಫಾ ಟೂರ್ನಿಂದ ರೊನಾಲ್ಡೊ ಟೀಂ ಔಟ್!‌ ಕಣ್ಣೀರಿಟ್ಟ ಫುಟ್‌ಬಾಲ್‌ ದಿಗ್ಗಜ!

masthmagaa.com:

ಕತಾರ್‌ನಲ್ಲಿ ನಡಿತಾಯಿರೊ ಫಿಫಾ ವಿಶ್ವಕಪ್‌ನಲ್ಲಿ ಸ್ಟಾರ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪೋರ್ಚುಗಲ್‌ ತಂಡದ ಪ್ರಯಾಣ ನಿನ್ನೆ ಕೊನೆಗೊಂಡಿದೆ. ಪೋರ್ಚುಗಲ್‌ ವಿರುದ್ದ ಆಫ್ರಿಕಾ ಖಂಡದ ಮೊರಕ್ಕೊ 1-0 ಗೋಲುಗಳ ಅಂತರದಿಂದ ಗೆದ್ದಿದೆ. ಇದರೊಂದಿಗೆ ಫುಟ್‌ಬಾಲ್‌ ಪ್ರಿಯರ ಹಾಟ್‌ ಫೇವರೆಟ್‌ ಪೋರ್ಚುಗಲ್‌ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದ್ರಿಂದ ನಿರಾಶೆಗೊಂಡ ರೊನಾಲ್ಡೊ ಕಣ್ಣೀರಿಟ್ಟಿದ್ದಾರೆ. ಇತ್ತ ಪೋರ್ಚುಗಲ್‌ ತಂಡದ ವಿರುದ್ದ ಗೆದ್ದ ಮೊರಕ್ಕೊ ಹೊಸ ಇತಿಹಾಸ ಸೃಷ್ಟಸಿದೆ. ಫಿಫಾ ಇತಿಹಾಸದಲ್ಲೇ ಸೆಮಿಫೈನಲ್‌ ತಲುಪಿದ ಆಫ್ರಿಕಾದ ಮೊದಲ ತಂಡ ಅನ್ನೊ ಹೆಗ್ಗಳಿಕೆಗೆ ಮೊರಕ್ಕೊ ಪಾತ್ರವಾಗಿದೆ. ಇತ್ತ ಕ್ವಾರ್ಟರ್‌ ಫೈನಲ್‌ನ ಅಂತಿಮ ಮ್ಯಾಚ್‌ನಲ್ಲಿ ಇಂಗ್ಲೆಂಡ್‌ ವಿರುದ್ದ ಫ್ರಾನ್ಸ್‌ 2-1 ಗೋಲುಗಳ ಅಂತರದಿಂದ ಗೆದ್ದು, ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಡಿಸೆಂಬರ್‌ 15 ರಂದು ಮೊರಕ್ಕೊ ಹಾಗೂ ಫ್ರಾನ್ಸ್‌ ತಂಡಗಳು ಪರಸ್ಪರ ಕಣಕ್ಕಿಳಿಯಲಿವೆ.

-masthmagaa.com

Contact Us for Advertisement

Leave a Reply