ಕಟ್ಟಿಂಗ್ ಶಾಪ್ ಸಿನಿಮಾ ವಿಮರ್ಶೆ!

masthmagaa.com:

2 ಲಾಕ್ ಡೌನ್ ಗಳಿಂದ ಕಂಗೆಟ್ಟಿರುವ ಕನ್ನಡ ಚಿತ್ರರಂಗದಲ್ಲಿ 2 ವರ್ಷದಿಂದ ಬಿಡುಗಡೆಗೆ ರೆಡಿ ಇರುವ ಸಿನಿಮಾಗಳು 350ಕ್ಕು ಹೆಚ್ಚು. ಅದೇ ಕಾರಣಕ್ಕೇನೆ ಈಗ ವಾರಕ್ಕೆ 8 ರಿಂದ 10 ಸಿನಿಮಾಗಳು ಬಿಡುಗಡೆ ಆಗ್ತಾ ಇವೆ. ಇನ್ ಫ್ಯಾಕ್ಟ್ ಲಾಕ್ ಡೌನ್ ಮುಗಿದಮೇಲೆ ಜನ ಥಿಯೇಟರ್ ಗೆ ಬರ್ತಾರ ಅನ್ನೋ ಪ್ರಶ್ನೆಗೆ ಕೆಜಿಎಫ್ 2 ಸಿನಿಮಾ ದೊಡ್ಡದಾಗಿ ಉತ್ತರ ಕೊಟ್ಟಿದೆ. ಕೆಜಿಎಫ್ ಏನೋ ದೊಡ್ಡ ಸಿನಿಮಾ, ಜನ ಕಾಯ್ತಾ ಇದ್ರು, ಸಿನಿಮಾ ನೋಡಿದ್ರು, ಗೆಲ್ಲಿಸಿದ್ರು. ಈಗ ರಿಯಲ್ ಚಾಲೆಂಜ್ ಇರೋದು ಚಿಕ್ಕ ಸಿನಿಮಾಗಳಿಗೆ. ಆಗಲೇ ಹೇಳಿದ ಹಾಗೆ ವಾರಕ್ಕೆ 8 ರಿಂದ 10 ಸಿನಿಮಾ ರಿಲೀಸ್ ಆಗ್ತಾ ಇದೆ. ಕಂಟೆಂಟ್ ಇಂದ, ಟ್ರೈಲರ್ ಇಂದ, ಪ್ರಮೋಶನಲ್ ಕಂಟೆಂಟ್ ಇಂದ ಗಮನ ಸೆಳೆದ ಕೆಲವು ಸಿನಿಮಾಗಳನ್ನಸ್ಟೇ ನಮಗೂ ಕೂಡ ನೋಡೋಕೆ ಸಾಧ್ಯ ಆಗ್ತಾ ಇದೆ. ಹೊಸ ತಂಡ ಆಗಿದ್ದರೂ, ಟ್ರೈಲರ್, ಹಾಡುಗಳು ಮತ್ತು ಯುನೀಕ್ promotions ಮೂಲಕ ನಿರೀಕ್ಷೆ ಹುಟ್ಟಿಸಿದ್ದ ಕಟ್ಟಿಂಗ್ ಶಾಪ್ ಸಿನಿಮಾದ ವಿಮರ್ಶೆ ನ ನಿಮ್ಮ ಮುಂದೆ ಇಡ್ತಾ ಇದೀವಿ. ಬಿಡುಗಡೆಗೂ ಮುನ್ನ ಹುಟ್ಟಿಸಿದ್ದ ನಿರೀಕ್ಷೆಯನ್ನ ಕಟ್ಟಿಂಗ್ ಶಾಪ್ ಸಿನಿಮಾ ರೀಚ್ ಆಗಿದೆ.

ಒಂದು ಸಿನಿಮಾನ ನಾವು ಯಾಕೆ ನೋಡ್ತೀವಿ, ಒಂದು ಫ್ರೀ ಟೈಂ ಸಿಕ್ಕಿರತ್ತೆ, ಸಿಕ್ಕಿರೋ ಟೈಂ ನಲ್ಲಿ ಸ್ವಲ್ಪ ರಿಲ್ಯಾಕ್ಸ್ ಮಾಡೋಣ, ಸ್ವಲ್ಪ ನಗೋಣ, ಬೇರೆ ವಿಷಯದಲ್ಲಿ ಎಂಗೇಜ್ ಆಗೋಣ, ಸ್ವಲ್ಪ ಮಟ್ಟಿಗೆ inspire ಆಗೋಣ, ಸೋ ಈ ಮೂರು ಕಾರಣಗಳಿಗೆ ಜನರಲ್ ಆಗಿ ನೋಡ್ತೀನಿ. ಸೋ, ಈ ಕಟ್ಟಿಂಗ್ ಶಾಪ್ ಸಿನಿಮಾ ನಿಮ್ಮನ್ನ ಎಂಗೇಜ್, ಎಂಟರ್ಟೈನ್ ಮತ್ತು ಇನ್ಸ್ಪೈರ್ ಈ ಮೂರನ್ನು ಕೂಡ ಮಾಡತ್ತೆ ಅದು ಕೂಡ ಎಲ್ಲೂ ಬೋರ್ ಹೊಡೆಸದ ಹಾಗೆ.
ಇನ್ನು ಈ ಸಿನಿಮಾಗೆ ಕಟ್ಟಿಂಗ್ ಶಾಪ್ ಅಂತಾನೇ ಯಾಕೆ ಹೆಸರು ಅಂದ್ರೆ ಈ ಚಿತ್ರದ ನಾಯಕ ಒಬ್ಬ ಸಂಕಲನಕಾರ, ಅಂದ್ರೆ ಎಡಿಟರ್, ಸೋ ಎಡಿಟ್ ಮಾಡೋದು ಒಂಥರಾ ಕಟ್ಟಿಂಗ್ ಅಲ್ವಾ ಅದಕ್ಕೆ ಕಟ್ಟಿಂಗ್ ಶಾಪ್ ಅಂತ ಹೆಸರು, ಇನ್ನು ಹೀರೋ ಕಟ್ಟಿಂಗ್ ಅಂದ್ರೆ ಎಡಿಟ್ ಮಾಡೋದು ಕೂಡ ಮಾವನ ಕಟ್ಟಿಂಗ್ ಶಾಪ್ ಅಲ್ಲೇ. ಸೋ on that note ಒಬ್ಬ editor ಅನ್ನ ಮುಖ್ಯಪಾತ್ರವನ್ನಾಗಿ ತೋರಿಸಿರುವ ಈ ಸಿನಿಮಾ India’s ಫರ್ಸ್ಟ್ movie based on an editor. ಈ ಒಂದು ಪ್ಲಾಟ್ ಪಾಯಿಂಟ್ ಅನ್ನ ಸಿನಿಮಾ ಮಾಡಿರುವ ನಿರ್ದೇಶಕ ಪವನ್ ಭಟ್ ಅವರ ಬೋಲ್ಡ್ attempt ಗೆ appreciate ಮಾಡಲೇಬೇಕು.
ಇನ್ನು Scratch ಇಂದ ಶುರು ಮಾಡಿದ ಒಬ್ಬ ವ್ಯಕ್ತಿ ಮುಂದೊಂದು ದಿನ ಹೇಗೆ ದೊಡ್ಡ ಮನುಷ್ಯ ಆಗ್ತಾನೆ ಅನ್ನೋದು ಚಿತ್ರದ ಒನ್ ಲೈನ್. ಆದರೆ ಈ ಒನ್ ಲೈನ್ ಅನ್ನ ಎಕ್ಸಿಕ್ಯೂಟ್ ಮಾಡೋದಕ್ಕೆ, ಚೂಸ್ ಮಾಡಿಕೊಂಡಿರೋದು ಒಬ್ಬ ಎಡಿಟರ್ ನ ಕಥೆ. ಸೋ, ಇದೇ ಈ ಸಿನಿಮಾದ ಫ್ರೆಸ್ಸ್ನೆಸ್, ಬ್ರೀದರ್, ಪ್ಲಸ್ ಪಾಯಿಂಟ್ ಎಲ್ಲ.
ಚಿತ್ರದ ಫಸ್ಟ್ ಹಾಫ್ ನಾಯಕನ ಕಾಲೇಜ್ ಲೈಫ್, ಕಾಲೇಜ್ ಫ್ರೆಂಡ್ಸ್, ಗರ್ಲ್ ಫ್ರೆಂಡ್, ಅಮ್ಮ, ಅಣ್ಣ, ಮಾವ, ಮಾವನ ಫೋಟೋ ಸ್ಟುಡಿಯೋ ಇದೆಲ್ಲವನ್ನ ಎಸ್ಟಾಬ್ಲಿಷ್ ಮಾಡತ್ತೆ. Compulsory ಕ್ರಷ್ ಹಾಡು, ಲೆಕ್ಚರರ್ಸ್ ಜೊತೆಗಿನ ತರ್ಲೆ, ಪ್ರಿನ್ಸಿಪಾಲ್, ಗರ್ಲ್ ಫ್ರೆಂಡ್ ಸಿಗೋದು ಎಲ್ಲ entertaining ಆಗಿ ಇದೆ. ಎಲ್ಲರ ಜೀವನದಲ್ಲೂ ಇದೆಲ್ಲ ಆಗಿರುತ್ತೆ ಅಲ್ವಾ ಅನ್ನುವಷ್ಟು ನ್ಯಾಚುರಲ್ ಆಗಿ ಮೂಡಿಬಂದಿದೆ.
ಬಹುತೇಕ ಹೊಸ ಮುಖಗಳೇ ಇರುವ ಈ ಸಿನಿಮಾದಲ್ಲಿ ಎಲ್ಲರೂ ನ್ಯಾಚುರಲ್ ಆಗಿ ನಟಿಸಿದ್ದಾರೆ ಇನ್ಕ್ಲೂಡಿಂಗ್ ಸಿನಿಮಾದ ನಾಯಕ ಪ್ರವೀಣ್. ಹೀರೋ ಅನ್ನೋ ಕಾರಣಕ್ಕೆ ಅವನ ಲೈಫ್ ಅಲ್ಲಿ miracle ಎಲ್ಲ ಆಗಲ್ಲ, commerical ಸಿನಿಮಾಗಳ ಥರ ಬಂದ ಕಷ್ಟಗಳನ್ನೆಲ್ಲ ಚಿಟಿಕೆ ಹೊಡೆದು ಅವನು ಸಾಲ್ವ್ ಮಾಡಲ್ಲ, ಹೀರೋ ಅನ್ನೋ ಕಾರಣಕ್ಕೆ ಅವನ ಪಾತ್ರ ಮಾತ್ರ ಹೈಲೈಟ್ ಮಾಡಿ ಬೇರೆ ಪಾತ್ರಗಳನ್ನ ಡಮ್ಮಿ ಮಾಡಿಲ್ಲ. ಒಟ್ನಲ್ಲಿ ಈ ಸಿನಿಮಾದ ನಾಯಕ ನಮ್ ಥರ, ನಿಮ್ ಥರ ಒಬ್ಬ ಸಾಮಾನ್ಯ ಯುವಕ ಅಷ್ಟೇ, ಒಬ್ಬ ಸಾಮಾನ್ಯ ಮನುಷ್ಯನ ಲೈಫ್ ಅಲ್ಲಿ ಫ್ರೆಂಡ್ ಅಣ್ಣ, ಅಮ್ಮ, ಗರ್ಲ್ ಫ್ರೆಂಡ್, ಮಾವ ಮತ್ತೆ ಅವನ ಪ್ಯಾಶನ್ ಎಷ್ಟು ಇಂಪಾರ್ಟೆಂಟ್ ಆಗುತ್ತೋ, ಈ ಸಿನಿಮಾದ ಪಾತ್ರಗಳೂ ಕೂಡ ಅಷ್ಟೇ ಇಂಪಾರ್ಟೆಂಟ್ ಅನ್ನೋ ರೀತಿ ತೋರಿಸಿದ್ದಾರೆ. ಇನ್ನು ಈ ಸಿನಿಮಾದ ಪಾತ್ರವರ್ಗ ಅಚ್ಚುಕಟ್ಟು ಆಗಿ ಇದೆ, ಟೇಲರ್ ಮೇಡ್ ಥರ ಇದೆ. ಹಾಗೆ ಎಲ್ಲ ಪಾತ್ರಗಳಿಗೂ ಒಂದು ಕ್ಲಿಯರ್ ರೌಂಡ್ ಅಪ್ ಇದೆ.
ಇಷ್ಟು ಅಕುರೆಟ್ ಆಗಿ ಕಾಸ್ಟ್ ಮಾಡಿರುವ ನಿರ್ದೇಶಕ ಪವನ್ ಭಟ್ ಅವರ ಸೆನ್ಸಿಬಿಲಿಟಿ ಗೆ ಇದು ಒಂದು ಉದಾಹರಣೆ. ಅವರೇ ಬರೆದಿರುವ ಸಂಭಾಷಣೆಗಳು ಚಿತ್ರದ ಕಥೆಗೆ ಬಹಳ ಆಪ್ಟ್ ಆಗಿ ಸೂಟ್ ಆಗತ್ತೆ.
ಇನ್ನು ಒಬ್ಬ ಎಡಿಟರ್ ಸಿನಿಮಾ ಇಂಡಸ್ಟ್ರಿಯಲ್ಲಿ ಯಾವ ರೀತಿ ಸವಾಲುಗಳನ್ನ ಫೇಸ್ ಮಾಡಬೇಕಾಗಿ ಬರತ್ತೆ ಅನ್ನೋದನ್ನ ಈ ಸಿನಿಮಾದಲ್ಲಿ ತೋರಿಸಿದ್ದಾರೆ. ಅದು ಕೂಡ ಇಂಟರೆಸ್ಟಿಂಗ್ ಆಗಿದೆ.
ಇನ್ನು ನಾಯಕನ ಮಾವನ ಪಾತ್ರ ಮಾಡಿರುವ ನವೀನ್ ಕೃಷ್ಣ ಅವರದು ಮನೋಜ್ಞ ಅಭಿನಯ. ಇತ್ತೀಚಿನ ದಿನಗಳಲ್ಲಿ ನವೀನ್ ಕೃಷ್ಣ ಅವರನ್ನ ಇಷ್ಟು ಎಫೆಕ್ಟಿವ್ ಆಗಿ ಬಳಸಿಕೊಂಡಿರುವ ಸಿನಿಮಾ ಇದೇ ಅಂದ್ರೆ ತಪ್ಪಾಗಲ್ಲ. ಈ ಪಾತ್ರ ಮತ್ತು ಹೀರೋ ಪಾತ್ರವನ್ನ ಬಿಟ್ರೆ ತುಂಬಾ ಕಾಡೋದು ನಾಯಕನ ಸ್ನೇಹಿತ ದೀಕ್ಷಿತ್ ಮತ್ತು ನಾಯಕನ ಅಣ್ಣನ ಪಾತ್ರ.
ಸ್ನೇಹಿತ ದೀಕ್ಷಿತ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೀಪಕ್ ಭಟ್ excels in every scene. In fact ಕೆಲವೊಂದು ಸೀನ್ ಗಳಲ್ಲಿ ನಾಯಕನ ಪಾತ್ರವೇ ಇವರ ಮುಂದೆ ಡಲ್ ಅನ್ಸತ್ತೆ ಅಷ್ಟು ನ್ಯಾಚುರಲ್ ಆಗಿ ಆಕ್ಟ್ ಮಾಡಿದ್ದಾರೆ.ಇನ್ನು ಹೀರೋ ಪ್ರವೀಣನ ಅಣ್ಣನ ಪಾತ್ರವನ್ನ ಪ್ರಸಿದ್ಧ ಯಕ್ಷಗಾನ ಕಲಾವಿದ ಪ್ರಸಾದ್ ಚೆರ್ಕಾಡಿ ಮಾಡಿದ್ದಾರೆ. ಅವರ ನಟನೆ ಕೂಡ ಟು ದ ಪಾಯಿಂಟ್.
ಇನ್ನು ನಾಯಕಿ ಅರ್ಚನಾ ಕೊಟ್ಟಿಗೆ ಅವರಿಗೆ ಇಲ್ಲಿ ಸ್ಟ್ರಗಲಿಂಗ್ ಬಾಯ್ ಫ್ರೆಂಡ್ ಗೆ ಬ್ಯಾಕ್ ಬೋನ್ ಆಗಿ ನಿಲ್ಲುವ ಒಂದು ಸಿಂಪಲ್ ಹುಡ್ಗಿ ಪಾತ್ರ. ಈ ಪಾತ್ರವನ್ನ ಅವರು ಕನ್ವಿಸಿಂಗ್ ಆಗಿ ಮಾಡಿದ್ದಾರೆ.
ಇನ್ನು ಈ ಚಿತ್ರದಲ್ಲಿ ಹಿರಿಯ ನಿರ್ದೇಶಕ ಭಾರ್ಗವ ಇದ್ದಾರೆ. ಆವರನ್ನ ಬಳಸಿಕೊಂಡಿರುವ ರೀತಿ ಚೆನ್ನಾಗಿದೆ. ಅದನ್ನ ನೀವು ಥಿಯೇಟರಲ್ಲಿ ನೋಡಿ ಎಂಜಾಯ್ ಮಾಡಬೇಕು. ರಂಗಿತರಂಗ ರಫಿಕ್ ಖ್ಯಾತಿಯ ಕಾರ್ತಿಕ್ ಚಿತ್ರದ ಸೆಕೆಂಡ್ ಹಾಫ್ ನಲ್ಲಿ ಬರ್ತಾರೆ, ಅವರು ಬಂದಮೇಲೆ ಚಿತ್ರ ಇನ್ನೊಂದು ಲೆವೆಲ್ ನಲ್ಲಿ ಕಿಕ್ ಸ್ಟಾರ್ಟ್ ಆಗತ್ತೆ. ಅವರ ಕಾಮೆಡಿ ಪಂಚ್ ಗಳು ಚೆನ್ನಾಗಿ ಕಿಕ್ ಕೊಡುತ್ತೆ.
 
ಓಂ ಪ್ರಕಾಶ್ ರಾವ್ ಮತ್ತು ತರುಣ್ ಸುಧೀರ್ ಪಾತ್ರಗಳು ಈ ಸಿನಿಮಾದ ಸರ್ಪ್ರೈಸ್ ಎಲಿಮೆಂಟ್ಸ್, ಅದೇನು ಅಂತ ನೀವೇ ಸಿನಿಮಾ ನೋಡಿ ತಿಳಿದುಕೊಳ್ಳಿ. 
ಇನ್ನು ಸಿನಿಮಾದ ನಾಯಕ ಪ್ರವೀಣ್ ಅವರೇ ಸಿನಿಮಾಗೆ ಸಂಗೀತ ಮತ್ತು BGM ಮಾಡಿದ್ದಾರೆ. ಕೆಲವೊಂದು ಸೀನ್ ಗಳಲ್ಲಿ ಮ್ಯೂಸಿಕ್ ಇಲ್ವೇ ಇಲ್ಲ. ಈ ಪ್ರಯೋಗ ನಿಜಕ್ಕೂ ವರ್ಕ್ ಆಗಿದೆ. ಇನ್ನು ಕ್ಲೈಮ್ಯಾಕ್ಸ್ ನಲ್ಲಿ ಪ್ರವೀಣ್ ಅವರ ನಟನೆ ಮತ್ತು ಓವರ್ ಆಲ್ ಕ್ಲೈಮ್ಯಾಕ್ಸ್ ಸೀನ್ ಈ ಸಿನಿಮಾದ ಬಿಗ್ಗೆಸ್ಟ್ ಹೈಲೈಟ್.
 
ಹಾಗಾದ್ರೆ ಈ ಸಿನಿಮಾದಲ್ಲಿ ನೆಗೆಟಿವ್ ಇಲ್ವಾ ಅಂತ ನೀವು ಕೇಳಬಹದು. ಇದೆ, ಸಣ್ಣ ಪುಟ್ಟ ಫ್ಲ್ವಾಸ್ ಇದೆ ಇಲ್ಲ ಅಂತ ಇಲ್ಲ. ಫ್ಲಾಸ್ ಇರೋದು ಸ್ಕೇಲ್ ವಿಷಯದಲ್ಲಿ, ಮೇಕಿಂಗ್ ವಿಷಯದಲ್ಲಿ ಆದ್ರೆ ಕಂಟೆಂಟ್ ನಲ್ಲಿ ಅಲ್ಲ. Ofcourse, ಹೊಸಬರ ಸಿನಿಮಾ ಆದ ಕಾರಣ ಬಡ್ಜೆಟ್ ಕನ್ಸ್ಟ್ರೈಂಟ್ಸ್ ಇದೆ, ಅದು ಸ್ಕ್ರೀನ್ ಮೇಲೆ ಕಾಣುತ್ತೆ, ಆದ್ರೆ ಇರುವ limitations ನಲ್ಲೇ ಒಂದೊಳ್ಳೆ ಡೀಸೆಂಟ್ ಸಿನಿಮಾ ಮಾಡಿರುವ ತಂಡದ ಶ್ರಮ ಎದ್ದು ಕಾಣುತ್ತೆ. ಒಳ್ಳೆ ಬಡ್ಜೆಟ್ ಕೊಟ್ರೆ ಚೆನ್ನಾಗೇ ಸಿನಿಮಾ ಮಾಡ್ತಾರೆ ಅನ್ನುವಂಥ ಪಿಕ್ಚರ್ ಅನ್ನ ನಿರ್ದೇಶಕ ಪವನ್ ಭಟ್ ಕೊಟ್ಟಿದ್ದಾರೆ.
 
ಇರುವ ಲಿಮಿಟೇಶನ್ಸ್ ಎಲ್ಲ ಬದಿಗಿಟ್ಟು ಎಲ್ಲೂ ಬೋರ್ ಹೊಡೆಸದ ಎಂಟರ್ಟೈನಿಂಗ್ ಸಿನಿಮಾ ಮಾಡಿರುವ ಕಟ್ಟಿಂಗ್ ಶಾಪ್ ಸಿನಿಮಾ ತಂಡ ಇನ್ನಷ್ಟು ಒಳ್ಳೆ ಸಿನಿಮಾ ಮಾಡ್ಬೇಕು ಅಂದ್ರೆ ಜನ ಈ ಸಿನಿಮಾವನ್ನ ನೋಡಬೇಕು, ಈ ಸಿನಿಮಾ ಗೆಲ್ಲಬೇಕು. ಸೋ, ಈ ಹೊಸಬರ ಒಳ್ಳೆ ಚಿತ್ರಾನ ಗೆಲ್ಲಿಸುವ ಹೊಣೆಗಾರಿಕೆ ಈಗ ಪ್ರೇಕ್ಷಕರ ಮೇಲಿದೆ.
-masthmagaa.com
Contact Us for Advertisement

Leave a Reply