ಬಿಪರ್‌ಜಾಯ್‌ ಚಂಡಮಾರುತ: ಕಚ್‌ನಲ್ಲಿ ಸೆಕ್ಷನ್‌ 144, ಪ್ರಧಾನಿ ಮೋದಿಯಿಂದ ಪರಿಶೀಲನಾ ಸಭೆ

masthmagaa.com:

ಬಿಪರ್‌ಜಾಯ್‌ ಚಂಡಮಾರುತ ಜೂನ್ 15ರಂದು ಕಚ್ ಕರಾವಳಿ ತೀರದಲ್ಲಿರುವ ಜಕೌ ಬಂದರನ್ನು ಗಂಟೆಗೆ 150 ಕಿಮೀ ವೇಗದಲ್ಲಿ ಪ್ರವೇಶಿಸಲಿರುವ ಹಿನ್ನೆಲೆಯಲ್ಲಿ ಸೌರಾಷ್ಟ್ರ ಮತ್ತು ಕಚ್‌ನಲ್ಲಿ ಇಂದಿನಿಂದಲೇ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಕಚ್‌ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಜೂ.16ರವರೆಗೂ ಇಲ್ಲಿ ಸೆಕ್ಷನ್ 144 ಇರಲಿದೆ. ಅತ್ತ ಪ್ರಧಾನಿ ಮೋದಿಯವ್ರು ಕೂಡ ಪರಿಶೀಲನಾ ಸಭೆ ನಡೆಸಿದ್ದಾರೆ. ಚಂಡಮಾರುತದಿಂದ ಆಗಬಹುದಾದ ಹಾನಿ ತಡೆಗಟ್ಟಲು ಎಲ್ಲ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮುಂಬೈ, ಥಾಣೆಗಳಲ್ಲಿ ಈ ಚಂಡಮಾರುತದ ಪ್ರಭಾವದಿಂದ ಭೂಕುಸಿತ ಆಗುವ ಸಾಧ್ಯತೆ ದಟ್ಟವಾಗಿ ಇರುವುದರಿಂದ ಅಲ್ಲೆಲ್ಲ ಯೆಲ್ಲೋ ಅಲರ್ಟ್ ಹೇರಲಾಗಿದೆ. ಸೌರಾಷ್ಟ್ರ ಮತ್ತು ಕಚ್‌ನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) 7 ತಂಡಗಳನ್ನು ನಿಯೋಜಿಸಲಾಗಿದೆ. ಇನ್ನು ಪೋರ್‌ಬಂದರ್, ದೇವಭೂಮಿ ದ್ವಾರಕಾ, ಜಮ್ನಾಗರ್, ಕಚ್ ಮತ್ತು ಮೊರ್ಬಿ ಜಿಲ್ಲೆಗಳಲ್ಲಿ ಕೆಳ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದವರನ್ನೆಲ್ಲ ಅಲ್ಲಿಂದ ಸ್ಥಳಾಂತರ ಮಾಡುವ ಕೆಲಸ ಇಂದಿನಿಂದ ಶುರುವಾಗಿದೆ. ಈಗಾಗಲೇ ಸುಮಾರು 7500 ಜನರನ್ನು ಬೇರೆಡೆಗೆ ಕಳಿಸಲಾಗಿದೆ. ಈ ಕರಾವಳಿ ಭಾಗದಿಂದ ಏನಿಲ್ಲವೆಂದರೂ 10 ಸಾವಿರದಷ್ಟು ಜನರು ಸ್ಥಳಾಂತರಗೊಳ್ಳಲಿದ್ದಾರೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply