ಮುಂದಿನ ಎರಡು ದಿನದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ?

masthmagaa.com:

ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರೋ ʻಬಿಪರ್‌ಜಾಯ್‌ʼ ಚಂಡಮಾರುತ ಪಶ್ಚಿಮ ಕರಾವಳಿ ರಾಜ್ಯಗಳಲ್ಲಿ ಆತಂಕ ಹೆಚ್ಚಿಸಿದೆ. ಮುಂದಿನ 6 ಗಂಟೆಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದ್ದು, ಗುಜರಾತ್, ಕೇರಳ, ಕರ್ನಾಟಕ ಮತ್ತು ಗೋವಾದಲ್ಲಿಯೂ ಇದರ ಪರಿಣಾಮ ಕಂಡು ಬರಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ. ಇದರ ಪರಿಣಾಮ ಪಶ್ಚಿಮ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಸಮುದ್ರಕ್ಕೆ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದ್ದು, ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಕೂಡ ವಾಪಸ್ ಬರುವಂತೆ ಸೂಚಿಸಲಾಗಿದೆ. ಮತ್ತೊಂದ್‌ ಕಡೆ ಮುಂಗಾರು ಮಳೆ ಕೇರಳಕ್ಕೆ ಅಪ್ಪಳಿಸಿದ್ದು, ಮುಂದಿನ 2 ದಿನಗಳಲ್ಲಿ ಕೇರಳದ ಉಳಿದ ಭಾಗ, ತಮಿಳುನಾಡು, ಕರ್ನಾಟಕ, ನೈಋತ್ಯ, ಮಧ್ಯ ಮತ್ತು ಈಶಾನ್ಯ ಬಂಗಾಳಕೊಲ್ಲಿಯ ಕೆಲವು ಭಾಗಗಳನ್ನ ತಲುಪುವ ನಿರೀಕ್ಷೆಯಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಅಂದ್ಹಾಗೆ ಕೇರಳ ಹಾಗೂ ಲಕ್ಷದ್ವೀಪಗಳಲ್ಲಿ ಗುರುತಿಸಲಾಗಿರೋ 14 ಹವಾಮಾನ ಘಟಕಗಳಲ್ಲಿ 2 ದಿನ ನಿರಂತರವಾಗಿ ಕನಿಷ್ಠ 60% ಮಳೆಯಾದ್ರೆ ಕೇರಳಕ್ಕೆ ಮಾನ್ಸೂನ್‌ ಎಂಟ್ರಿಯಾಗಿದೆ ಅಂತ ಅನೌನ್ಸ್‌ ಮಾಡಲಾಗುತ್ತೆ.

-masthmagaa.com

Contact Us for Advertisement

Leave a Reply