ಅರಬ್ಬೀ ಸಮುದ್ರದಲ್ಲಿ ಜನ್ಮ ತಾಳಲಿದೆ ʻತೇಜ್‌ʼ ಚಂಡಮಾರುತ!

masthmagaa.com:

ಅರಬ್ಬೀ ಸಮುದ್ರದಲ್ಲಿ ʻತೇಜ್‌ʼ ಅನ್ನೊ ಚಂಡಮಾರುತ ಉಂಟಾಗಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈ ವರ್ಷದಲ್ಲಿ ಅರಬ್ಬೀ ಸಮುದ್ರದಲ್ಲಿ ಬರ್ತಿರೋ ಎರಡನೇ ಸೈಕ್ಲೋನ್‌ ಆಗಿದ್ದು, ಸರದಿಯಂತೆ ಈ ಬಾರಿ ಭಾರತ ʻತೇಜ್”‌ ಅಂತ ಹೆಸರು ಕೊಟ್ಟಿದೆ. ಅರಬ್ಬೀ ಸಮುದ್ರದ ಆಗ್ನೇಯ ಹಾಗೂ ನೈರುತ್ಯ ಭಾಗದಲ್ಲಿ ಗಾಳಿಯ ಒತ್ತಡ ಕಡಿಮೆಯಾಗಿದೆ, ಹಾಗಾಗಿ ಈ ಭಾಗದಲ್ಲಿ ವಾಯು ಭಾರ ಕುಸಿತವಾಗಲಿದ್ದು ಶನಿವಾರ ಬೆಳಿಗ್ಗೆ ಹೊತ್ತಿಗೆ ಸೈಕ್ಲೋನ್‌ ಫಾರ್ಮ್‌ ಆಗಲಿದೆ ಅಂತ IMD ಹೇಳಿದೆ. ಒಮನ್‌ ಹಾಗೂ ಯೆಮನ್‌ ದೇಶಗಳತ್ತ ಈ ಚಂಡಮಾರುತ ಸಾಗುವ ಸಾಧ್ಯತೆ ಇದ್ದು, ತೀವ್ರಗೊಳ್ಳಲಿದೆ. ಈ ಹಂತದಲ್ಲಿ ಗಂಟೆಗೆ ಸುಮಾರು 89 ರಿಂದ 117 ಕಿಲೋಮೀಟರ್‌ ವೇಗದಲ್ಲಿ ಗಾಳಿ ಬೀಸಲಿದೆ ಅಂತ IMD ಹೇಳಿದೆ.

-masthmagaa.com

Contact Us for Advertisement

Leave a Reply