FIDE ಕ್ಯಾಂಡಿಡೆಟ್ಸ್‌ ಚೆಸ್‌ ಟೂರ್ನಿ: ಚಾಂಪಿಯನ್‌ ಆದ ಭಾರತದ ಗುಕೇಶ್!

masthmagaa.com:

ಕೆನಡಾದ ಟೊರೊಂಟೊದಲ್ಲಿ ನಡೆದ 2024ರ FIDE ಕ್ಯಾಂಡಿಡೆಟ್ಸ್‌ ಚೆಸ್‌ ಟೂರ್ನಿಯಲ್ಲಿ ಭಾರತದ ಡಿ.ಗುಕೇಶ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಚೆಸ್‌ ಇತಿಹಾಸದಲ್ಲಿ ಭಾರತ ಮತ್ತೊಮ್ಮೆ ಐತಿಹಾಸಿಕ ದಾಖಲೆ ಬರೆದಿದೆ. 17 ವರ್ಷದ ಗುಕೇಶ್‌, ಅತಿ ಕಿರಿಯ ವಯಸ್ಸಿನಲ್ಲೆ ಈ ಟೂರ್ನಿ ಗೆದ್ದ ವಿಶ್ವದ ಮೊದಲ ಆಟಗಾರ ಅನ್ನೊ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಂದ್ಹಾಗೆ 2014ರಲ್ಲಿ ಭಾರತದ ಚೆಸ್‌ ಮಾಂತ್ರಿಕ ವಿಶ್ವನಾಥನ್‌ ಆನಂದ್‌ ಈ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ರು, 10 ವರ್ಷಗಳ ಬಳಿಕ ಅಂದ್ರೆ ಈಗ ಗುಕೇಶ್‌ ಭಾರತದ ಪರ ಚಾಂಪಿಯನ್‌ ಆಗಿ ಅಮೋಘ ಸಾಧನೆ ಮಾಡಿದ್ದಾರೆ. ಇನ್ನು ಚಾಂಪಿಯನ್‌ ಆದ ಬಳಿಕ ಮಾತನಾಡಿದ ಗುಕೇಶ್‌, ದೇಶವನ್ನ ಪ್ರತಿನಿಧಿಸೊದಕ್ಕೆ ನನಗೆ ಹೆಮ್ಮೆಯಿದೆ. ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ದೊಡ್ಡ ಸಾಧನೆ ಮಾಡೊದೆ ನನ್ನ ಮುಂದಿನ ಗುರಿ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply