ವಿಮಾನದೊಳಗೆ ಹೊಗೆ ಬಿಡ್ತಿದ್ದ ವ್ಯಕ್ತಿ ಈಗ ಮುಂಬೈ ಪೊಲೀಸ್‌ ಅತಿಥಿ!

masthmagaa.com:

ಹಾರ್ತಿದ್ದ ವಿಮಾನದೊಳಗೆ ಹಾಯಾಗಿ ʻಫುಫುʼ ಮಾಡ್ತಾ… ಹೊಗೆ ಬಿಡ್ತಿದ್ದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ದೆಹಲಿಯಿಂದ ಮುಂಬೈ ಕಡೆ ಹಾರಾಟ ನಡೆಸಿದ್ದ ಇಂಡಿಗೋ ವಿಮಾನದೊಳಗೆ ಈ ಘಟನೆ ನಡೆದಿರೋದು ವರದಿಯಾಗಿದೆ. 42 ವಯಸ್ಸಿನ ವ್ಯಕ್ತಿಯೊಬ್ಬ… ವಿಮಾನ ಹಾರಾಟ ನಡೆಸ್ತಿರೋವಾಗ್ಲೇ ರೆಸ್ಟ್‌ರೂಮ್‌ಗೆ ತೆರಳಿ ಹೊಗೆಬತ್ತಿ ಎಳೆದಿದ್ದಾನೆ. ಬತ್ತಿ ವಾಸನೆ ವಿಮಾನದ ಸಿಬ್ಬಂದಿಯ ಮೂಗಿಗೆ ತಾಗಿ ಈ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಬೇಜವಾಬ್ದಾರಿತನ ಮೆರೆದ ಈತನನ್ನ ವಿಮಾನ ಮುಂಬೈನಲ್ಲಿ ಲ್ಯಾಂಡ್‌ ಆದ ತಕ್ಷಣವೇ ಪೊಲೀಸರಿಗೆ ಒಪ್ಪಿಸಲಾಗಿದೆ. ಸದ್ಯ ಈತನ ವಿರುದ್ಧ ಕೇಸ್‌ ದಾಖಲಾಗಿದೆ.

-masthmagaa.com

Contact Us for Advertisement

Leave a Reply