ಆರ್ಥಿಕ ಬಿಕ್ಕಟ್ಟಿನಲ್ಲೂ ಪಾಕ್‌ನಲ್ಲಿ ಪರಮಾಣು ಅಭಿವೃದ್ಧಿ: ಅಮೆರಿಕ

masthmagaa.com:

ಸದಾಕಾಲ ಬಿಕ್ಕಟ್ಟಿನಲ್ಲಿರೋದನ್ನ ತನ್ನ ಆರ್ಥಿಕ ನೀತಿಯನ್ನ ಮಾಡ್ಕೊಂಡು, ಇದ್ದಬದ್ದ ದೇಶಗಳಿಂದ ಸಾಲ ಪಡೆಯೋದನ್ನೇ ತನ್ನ ಆದಾಯ ಮಾಡ್ಕೊಂಡಿರೋ ಪಾಕ್‌ ಸೇನೆಗೆ ಮಾತ್ರ ದಂಡಿ ದಂಡಿಯಾಗಿ ದುಡ್ಡು ಸುರಿಯೋದು ಹೊಸ ವಿಷಯ ಏನಲ್ಲ… ಇದೀಗ ಇಂತಹ ದುರ್ಭಿಕ್ಷ ಸ್ಥಿತಿಯಲ್ಲಿದ್ರೂ ಪಾಕ್‌ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನ ಮಾಡರ್ನೈಸ್‌ ಮಾಡ್ತಿದೆ ಅಂತ ನಾವಲ್ಲ… ಒಂದು ಕಾಲದಲ್ಲಿ ಪಾಕ್‌ನ್ನ ಸಾಕಿ ಸಲುಹಿದ ಅಮೆರಿಕ ಹೇಳ್ತಿದೆ. ನೆನ್ನೆ ತಾನೇ ಅಲ್ಲಿನ ಸಂಸತ್‌ನಲ್ಲಿ ಭಾರತದ ಡಿಫೆನ್ಸ್‌ ನೀತಿಯನ್ನ ಕೊಂಡಾಡಿದ್ದ ಅಮೆರಿಕ ಸೇನೆಯ ಗುಪ್ತಚರ ವಿಭಾಗ ಈಗ ಪಾಕ್‌ ಬಗ್ಗೆ ಹೇಳೋವಾಗ ಈ ರೀತಿ ಹೇಳಿದೆ. ಅಮೆರಿಕದ ಡಿಫೆನ್ಸ್‌ ಇಂಟಲಿಜೆನ್ಸ್‌ ಏಜೆನ್ಸಿಯ ಮುಖ್ಯಸ್ಥ ಲೆಫ್ಟಿನೆಂಟ್‌ ಜೆನರಲ್‌ ಜೆಫ್ರಿ ಕ್ರೂಸ್‌, ಪಾಕಿಸ್ತಾನ ಆರ್ಥಿಕವಾಗಿ ಸಂಕಷ್ಟದಲ್ಲಿದ್ರು ತನ್ನ ಅಣ್ವಸ್ತ್ರಗಳನ್ನ ಆಧುನೀಕರಣಗೊಳಿಸೋದನ್ನ ಮಾತ್ರ ನಿಲ್ಲಿಸಿಲ್ಲ, ಮುಂದುವರೆಸಿದೆ. ಅಣ್ವಸ್ತ್ರಗಳನ್ನ ಹಾಗೆ ಅಣ್ವಸ್ತ್ರದ ಕಮಾಂಡ್‌ ಕಂಟ್ರೋಲ್‌ನ್ನ ಇನ್ನಷ್ಟು ಸೆಕ್ಯೂರ್‌ ಮಾಡ್ತಿದೆ ಅಂತ ಹೇಳಿದ್ದಾರೆ. ಇದೆ ವೇಳೆ ಪಾಕ್‌ ಅಕ್ಟೋಬರ್‌ನಲ್ಲಿ ನಡೆಸಿದ ಅಬಾಬೀಲ್‌ ಕ್ಷಿಪಣಿಯ ಪರೀಕ್ಷೆಯನ್ನ ಕೂಡ ಉಲ್ಲೇಖ ಮಾಡಿದ್ದಾರೆ. ಅಂದ್ಹಾಗೆ ಸ್ಟಾಕ್‌ಹೋಂ ರಿಪೋರ್ಟ್‌ ಪ್ರಕಾರ 2023ರ ಜನವರಿ ವೇಳೆಗೆ ಪಾಕ್‌ ಬಳಿ 170 ಅಣ್ವಸ್ತ್ರಗಳಿದ್ವು. ಇದೇ ವಿಚಾರವನ್ನ ಈಗ ಅಮೆರಿಕ ಕೂಡ ಹೇಳ್ತಿದೆ. ಇನ್ನು ಮುಂದುವರೆದು ಜೆಫ್ರಿ ಕ್ರೂಸ್‌, ಈಗಲು ಕೂಡ ಪಾಕ್‌ನ ಸಂಪೂರ್ಣ ಡಿಫೆನ್ಸ್‌ ಪಾಲಿಸಿ ಭಾರತದ ರಿಲೇಷನ್‌ ಮೇಲೆ ಡಿಪೆಂಡ್‌ ಆಗಿದೆ. ಕಾಶ್ಮೀರ ವಿಚಾರನ ಬಗೆಹರಿಸಿಕೊಳ್ಳೋಕೆ ಪಾಕ್‌ ಅಂತರಾಷ್ಟ್ರೀಯ ಬೆಂಬಲ ಪಡೆಯೋಕೆ ನೋಡ್ತಿದೆ ಅಂದಿದ್ದಾರೆ. ಜೊತೆಗೆ ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬರೋಕೆ ಪಾಕ್‌ ತನ್ನ ಮಿತ್ರ ರಾಷ್ಟ್ರಗಳಾದ ಚೀನಾ ಮತ್ತು ಸೌದಿ ಅರೇಬಿಯಾದಿಂದ ಸಹಾಯ ಪಡೆದುಕೊಳ್ತು. ಇಂಟರೆಸ್ಟಿಂಗ್‌ ಅಂದ್ರೆ ಅಮೆರಿಕದ ಸಂಸತ್‌ನಲ್ಲಿ ಈ ವರದಿ ಓದ್ತಿರೋ ಸಮಯದಲ್ಲೇ ಪಾಕ್‌ನ ಫಿನಾನ್ಸ್‌ ಮಿನಿಸ್ಟರ್‌ ಮುಹಮ್ಮದ್‌ ಔರಂಗಜೇಬ್‌ ಮತ್ತೊಂದು ಸಾಲ ಕೊಡಿ ಅಂತ ವಾಷಿಂಗ್ಟನ್‌ನಲ್ಲಿ IMF ಮುಂದೆ ಭಿಕ್ಷೆ ಬೇಡ್ತಿದ್ದಾರೆ.

-masthmagaa.com

Contact Us for Advertisement

Leave a Reply