ಮೇಕೆದಾಟು ಯೋಜನೆ ಬೆಂಬಲಿಸಿ: ರಾಜ್ಯದ ಎಲ್ಲ ಪಕ್ಷಗಳಿಗೆ HDD ಮನವಿ!

masthmagaa.com:

ರಾಜ್ಯದಲ್ಲಿರೊ ಎಲ್ಲಾ ಪಕ್ಷಗಳು ಮೇಕೆದಾಟು ಯೋಜನೆಯನ್ನ ಬೆಂಬಲಿಸಬೇಕು ಅಂತ ಮಾಜಿ ಪ್ರಧಾನಿ HD ದೇವೆಗೌಡ ಕರೆ ನೀಡಿದ್ದಾರೆ. ʻಮೇಕೆದಾಟು ಜಲಾಶಯ ಯೋಜನೆಗೆ ಅವಕಾಶ ನೀಡೋದಿಲ್ಲ ಅಂತ ತಮಿಳುನಾಡು ಸಿಎಂ MK ಸ್ಟಾಲಿನ್‌ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ. ಈ ಬಗ್ಗೆ ನಾವು ಭಯ ಪಡೋ ಅಗತ್ಯ ಇಲ್ಲ. ರಾಜ್ಯದ ಎಲ್ಲಾ ಪಕ್ಷಗಳು ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಮುಂದಾಗ್ಬೇಕು. ಅಲ್ದೇ ನಾವು ಕೂಡ ಮೇಕೆದಾಟು ಯೋಜನೆಯನ್ನ ಬೆಂಬಲಿಸೊ ತೀರ್ಮಾನವನ್ನ ಪ್ರಣಾಳಿಕೆಯಲ್ಲಿ ಪ್ರಕಟ ಮಾಡ್ತೀವಿ. ಈ ಯೋಜನೆ ಬಗ್ಗೆ ಚುನಾವಣೆ ಮುಗಿದ ಬಳಿಕ ಎಲ್ಲಾ ಪಕ್ಷಗಳೊಂದಿಗೆ ಸೇರಿ ತೀರ್ಮಾನ ಮಾಡ್ತೀವಿʼ ಅಂತ ದೇವೇಗೌಡರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply