‌DMDK ಚೀಫ್ ವಿಜಯಕಾಂತ್‌ ನಿಧನ: ಕಂಬನಿ ಮೀಡಿದ ಮೋದಿ

masthmagaa.com:

ತಮಿಳು ನಟ ಹಾಗೂ DMDK (ದೇಶಿಯ ಮುರ್ಪೊಕ್ಕು ದ್ರಾವಿಡ ಕಳಗಮ್) ಪಕ್ಷದ ಮುಖ್ಯಸ್ಥ ವಿಜಯ ಕಾಂತ್‌ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. 71 ವರ್ಷದ ವಿಜಯಕಾಂತ್‌ಗೆ ನ್ಯೂಮೋನಿಯಾ ಖಾಯಿಲೆ ಇದ್ದಿದ್ರಿಂದ ಅವರನ್ನ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವ್ರಿಗೆ ಕೋವಿಡ್‌ ಪಾಸಿಟಿವ್‌ ಇರೋದು ಕೂಡ ಧೃಡವಾಗಿತ್ತು. ಈ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದ ನಟ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಅಂತ ವರದಿಯಾಗಿದೆ. ವಿಜಯಕಾಂತ್‌ ಸಾವಿಗೆ ಪ್ರಧಾನಿ ಮೋದಿ,”ಆಪ್ತ ಸ್ನೇಹಿತ, ತಮಿಳುನಾಡಿನ ದಿಗ್ಗಜ ನಟ, ರಾಜಕೀಯ ಚತುರ ವಿಜಯಕಾಂತ್‌ರ ನಿಧನ ತುಂಬಲಾರದ ನಷ್ಟವಾಗಿದೆ” ಅಂತ ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಇನ್ನು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲೀನ್‌ ಸೇರಿದಂತೆ ತಮಿಳುನಾಡಿನ ರಾಜಕೀಯ ಗಣ್ಯರು ಹಾಗೂ ಸಿನಿಮಾ ತಾರಾಗಣ ವಿಜಯಕಾಂತ್‌ರ ಸಾವಿಗೆ ಕಂಬನಿ ಮಿಡಿದು ಶೋಕ ಸಾಗರದಲ್ಲಿ ಮುಳುಗಿದೆ.

-masthmagaa.com

Contact Us for Advertisement

Leave a Reply