ದಿನಕ್ಕೆ ಎಷ್ಟು ನೀರು ಕುಡಿಯಬೇಕು, ಹೊಸ ಅಧ್ಯಯನ ಏನ್‌ ಹೇಳುತ್ತೆ?

masthmagaa.com:

ಆರೋಗ್ಯವಾಗಿ ಇರ್ಬೇಕು ಅಂದ್ರೆ ದಿನಕ್ಕೆ ಕನಿಷ್ಠ 3 ಲೀಟರ್‌ ಅಥ್ವಾ 8 ಗ್ಲಾಸ್ ನೀರನ್ನ ಕುಡಿಬೇಕು ಅಂತ ವೈದ್ಯರು ಹೇಳೋದನ್ನ ಎಲ್ಲರೂ ಸಾಮನ್ಯವಾಗಿ ಕೇಳಿರ್ತಿರಾ. ಆದ್ರೆ 2 ಲೀಟರ್‌ ನೀರು ಜಾಸ್ತಿಯಾಯ್ತು ಎಲ್ಲಾ ಸಮಯದಲ್ಲೂ ಅಷ್ಟು ನೀರನ್ನ ಕುಡಿಯೋ ಅವಶ್ಯಕತೆ ಇಲ್ಲ ಅಂತ ಹೊಸ ಸ್ಟಡಿಯೊಂದು ಹೇಳಿದೆ. ಜನರು ನಿಜವಾಗ್ಲೂ ಎಷ್ಟು ನೀರು ಕುಡಿಬೇಕು ಅನ್ನೋದನ್ನ ತಿಳಿಯೋಕೆ ಸ್ಕಾಟ್‌ಲ್ಯಾಂಡ್‌ನ ಅಬರ್ಡೀನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೊಸ ಅಧ್ಯಯನ ನಡೆಸಿದ್ದಾರೆ. 23 ದೇಶಗಳ, 8 ದಿನದಿಂದ 96 ವರ್ಷ ವಯಸ್ಸಿನ ಸುಮಾರು 5 ಸಾವಿರಕ್ಕೂ ಹೆಚ್ಚು ಜನರನ್ನ ಅಧ್ಯಯನ ಮಾಡಿದ್ದಾರೆ. ಜನರು 1.5 ರಿಂದ 1.8 ಲೀಟರ್‌ ನೀರನ್ನ ಮಾತ್ರ ಕುಡಿದ್ರೆ ಸಾಕಾಗುತ್ತೆ ಅನ್ನೋದು ಈ ಅಧ್ಯಯನದಿಂದ ತಿಳಿದು ಬಂದಿದೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಅಂದ್ಹಾಗೆ ಹೆಚ್ಚು ಬಿಸಿಲು, ಹ್ಯುಮಿಡ್‌ ಅಥ್ವಾ ತೇವ ವಾತಾವರಣ, ಎತ್ತರ ಪ್ರದೇಶದಲ್ಲಿ ಇರೋರು, ಪ್ರೆಗ್ನೆಂಟ್‌ ಮತ್ತು ಹಾಲುಣಿಸೋ ಮಹಿಳೆಯರು ಮಾತ್ರ ಹೆಚ್ಚು ನೀರನ್ನ ಕುಡಿಬೇಕು. ಯಾಕಂದ್ರೆ ಇವ್ರಲ್ಲಿ ನೀರಿನ ವಿಸರ್ಜನೆ ಹೆಚ್ಚಿರುತ್ತೆ ಅಂತ ವರದಿಯಲ್ಲಿ ಸೂಚಿಸಲಾಗಿದೆ.

-masthmagaa.com

Contact Us for Advertisement

Leave a Reply