ಮಂಗಳವಾರದ ಫೇಸ್‌ಬುಕ್‌, ಇನ್‌ಸ್ಟಾ ಬಂದ್‌ಗೆ $2.79b ಕಳ್ಕೊಂಡ ಜುಕರ್‌ಬರ್ಗ್!

masthmagaa.com:

ಮಂಗಳವಾರ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ಗಳು ಜಗತ್ತಿನಾದ್ಯಂತ ಸ್ವಲ್ಪ ಹೊತ್ತು ನಿದ್ದೆ ಮಾಡಿದ್ವು. ಈ ನಿದ್ದೆ ಈಗ ಫೇಸ್‌ಬುಕ್‌ ಸಂಸ್ಥಾಪಕ ಹಾಗೂ ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ಗೆ ನಿದ್ದೆ ಕೆಡಿಸಿದೆ. ಸ್ವಲ್ಪ ಹೊತ್ತು ಈ ಆ್ಯಪ್‌ಗಳು ಮಲಗಿದ್ದಕ್ಕೆ ಜುಕರ್‌ಬರ್ಗ್‌ $2.79 ಬಿಲಿಯನ್‌ ಹಣ ಕಳ್ಕೊಂಡಿದ್ದಾರೆ. ಮೆಟಾ ಷೇರು ಮೌಲ್ಯದಲ್ಲಿ 1.6% ಇಳಿಕೆ ಕಂಡು ವಾಲ್‌ ಸ್ಟ್ರೀಟ್‌ನಲ್ಲಿ $490.22 ಡಾಲರ್‌ಗೆ ಇಳಿದಿವೆ. ಮಂಗಳವಾರ ಫೇಸ್‌ಬುಕ್‌ ಇನ್‌ಸ್ಟಾ ಸೇರಿ ಥ್ರೆಡ್ಸ್‌, ಯೂಟ್ಯೂಬ್‌ ಕೂಡ ಜರ್ಕ್‌ ಹೊಡಿದಿವೆ. ಈ ಬಗ್ಗೆ ಮಸ್ಕ್‌ರ Xನಲ್ಲಿ ಪೋಸ್ಟ್‌ಗಳ ಸುರಿಮಳೆ ಆಗಿತ್ತು. ಈ ವೇಳೆ ಮೆಟಾಗೆ ಟಾಂಗ್‌ ಕೊಟ್ಟ ಇಲಾನ್‌ ಮಸ್ಕ್‌ ತಮ್ಮ ಪೋಸ್ಟ್‌ನಲ್ಲಿ, ʻನೀವು ಈ ಪೋಸ್ಟನ್ನ ಓದ್ತಿದ್ದೀರ ಅಂದ್ರೆ, ಅದಕ್ಕೆ ಕಾರಣ ನಮ್ಮ ಸರ್ವರ್‌ಗಳು ವರ್ಕ್‌ ಆಗ್ತಿವೆʼ ಅಂತೇಳಿ ಟಾಂಕ್‌ ಕೊಟ್ಟಿದ್ದಾರೆ. ಇವ್ರ ಫೈಟಿಂಗ್‌ಗಂತು ವೇದಿಕೆ ಸಜ್ಜಾಗ್ಲಿಲ್ಲ, ಆದ್ರೆ ಸೋಷಿಯಲ್‌ ಮೀಡಿಯಾದಲ್ಲಿ ಜುಕರ್‌ಬರ್ಗ್‌ ಕಾಲೆಳೆಯೋದನ್ನ ಮಸ್ಕ್‌ ಕಂಡಿನ್ಯೂ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply