ಟೆಸ್ಟ್‌ ಸಿರೀಸ್‌ಗೂ ಮುನ್ನವೇ ಭಾರತಕ್ಕೆ ಕೊಹ್ಲಿ ವಾಪಸ್! ಏಕೆ ಗೊತ್ತಾ?

masthmagaa.com:

ವಿಶ್ವ ಕ್ರಿಕೆಟ್‌ನ ರನ್‌ ಮಶೀನ್‌ ವಿರಾಟ್‌ ಕೊಹ್ಲಿ ಸೌತ್‌ ಆಫ್ರಿಕಾದಲ್ಲಿ ನಡೆಯಲಿರೋ ಟೆಸ್ಟ್‌ ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ವಾಪಸ್ಸಾಗಿದ್ದಾರೆ. ಕುಟುಂಬದ ತುರ್ತು ಕರೆಯಿಂದಾಗಿ ಕೊಹ್ಲಿ ಭಾರತಕ್ಕೆ ತೆರಳಿದ್ದು ಸೌತ್‌ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್‌ಗೂ ಮುನ್ನವೇ ಬರ್ತಾರೆ ಅಂತ ತಿಳಿದು ಬಂದಿದೆ. ಸದ್ಯ ಏಕದಿನ ಸಿರೀಸ್‌ನಲ್ಲಿ ಗೆದ್ದು ಬೀಗಿದ್ದ ಭಾರತ ಸೌತ್‌ ಆಫ್ರಿಕಾ ವಿರುದ್ದ ಎರಡು ಟೆಸ್ಟ್‌ಗಳನ್ನಾಡಲಿದೆ. ಸೆಂಚೂರಿಯನ್‌ನಲ್ಲಿ ಡಿಸೆಂಬರ್‌ 26ರಿಂದ ಮೊದಲ ಟೆಸ್ಟ್‌, ಅಂದ್ರೆ ಬಾಕ್ಸಿಂಗ್‌ ಡೇ ಟೆಸ್ಟ್ ಆರಂಭವಾಗಲಿದೆ.

-masthmagaa.com

Contact Us for Advertisement

Leave a Reply