ಐದು ದಿನದ ಪ್ರವಾಸಕ್ಕಾಗಿ ಲಂಡನ್‌ಗೆ ಹಾರಿದ ಸಚಿವ ಜೈಶಂಕರ್‌!

masthmagaa.com:

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಐದು ದಿನಗಳ ಬ್ರಿಟನ್ ಪ್ರವಾಸಕ್ಕಾಗಿ ಇಂದು ಲಂಡನ್‌ ತಲುಪಿದ್ದಾರೆ.‌ ನವೆಂಬರ್‌ 15ರ ವರೆಗೆ ಅವರು ಲಾರ್ಡ್ಸ್‌ ಕ್ರಿಕೆಟ್‌ ಗ್ರೌಂಡ್‌ನ ಒಂದು ಕಾರ್ಯಕ್ರಮ, ಲಂಡನ್‌ನಲ್ಲಿರೊ ಭಾರತೀಯ ಹೈ ಕಮೀಷನರ್‌ ಕಛೇರಿಯ ದೀಪಾವಳಿ ಆಚರಣೆ, ಉತ್ತರಪ್ರದೇಶಕ್ಕೆ ಸೇರಿದ ಎರಡು ಪ್ರಾಚೀನ ವಿಗ್ರಹಗಳನ್ನು ವಾಪಸ್‌ ಪಡೆಯೋ ಕಾರ್ಯಕ್ರಮಗಳಲ್ಲಿ ಭಾಗಿಯಾಗೋ ಸಾಧ್ಯತೆ ಇದೆ. ಜೊತೆಗೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ರ ಭಾರತದ ಪ್ರವಾಸದ ತಯಾರಿ ಬಗ್ಗೆ UK ಫಾರಿನ್‌ ಸೆಕ್ರೆಟರಿ ಜೇಮ್ಸ್‌ ಕ್ಲೆವರ್ಲಿ ಜೊತೆ ಮಾತನಾಡಲಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರೊ ಬ್ರಿಟನ್‌ ವಿದೇಶಾಂಗ ಸಚಿವಾಲಯ “ಉಭಯ ದೇಶಗಳಿಗೆ ಉಪಯೋಗವಾಗೊ ಪಾಲುದಾರಿಕೆಗೆ ಕಮಿಟ್‌ ಆಗಲು ಮರ್ಗಸೂಚಿ ಸಿದ್ಧವಾಗಿದೆ. ನಮ್ಮ ಸ್ನೇಹ ಸಂಬಂಧಗಳನ್ನ ಇಂಪ್ರೂವ್‌ ಮಾಡೋ ಉದ್ದೇಶದಿಂದ ಸಚಿವ ಜೈಶಂಕರ್‌ ಭೇಟಿ ನೀಡಲಿದ್ದಾರೆ” ಅಂತೇಳಿದೆ.

-masthmagaa.com

Contact Us for Advertisement

Leave a Reply