ಮತ್ತೆ ದೋಸ್ತಿ ಮಾಡ್ಕೊಳ್ಳಲು ಮುಂದಾದ ಇರಾನ್‌ ಮತ್ತು ಪಾಕಿಸ್ತಾನ!

masthmagaa.com:

ಪರಸ್ಪರ ಸಂಘರ್ಷಕ್ಕಿಳಿದು ಕಿರಿಕ್‌ ಮಾಡ್ಕೊಂಡಿದ್ದ ಇರಾನ್‌ ಮತ್ತು ಪಾಕಿಸ್ತಾನ ಈಗ ಒಬ್ಬರ ಹೆಗಲ ಮೇಲೆ ಮತ್ತೊಬ್ರು ಕೈ ಹಾಕೋಕೆ ಮುಂದಾಗಿದ್ದಾರೆ. ಈಗ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪಾಕಿಸ್ತಾನಕ್ಕೆ ಭೇಟಿ ನೀಡ್ತಿದ್ದಾರೆ. ಉಭಯ ದೇಶಗಳ ನಡುವಿನ ಬಿಕ್ಕಟ್ಟನ ಶಮನಗೊಳಿಸಿ, ಉತ್ತಮ ಭಾಂದವ್ಯ ವೃದ್ದಿಸಲು ರೈಸಿ ಪಾಕ್‌ಗೆ 3ದಿನಗಳ ಭೇಟಿ ಕೊಡ್ತಿದ್ದಾರೆ. ಭೇಟಿ ವೇಳೆ ಪಾಕ್‌ನ ಅಧ್ಯಕ್ಷ ಹಾಗೂ ಪ್ರಧಾನಿಯನ್ನ ಮೀಟ್‌ ಮಾಡಿ ಮಾತುಕತೆ ನಡೆಸಲಿದ್ದಾರೆ. ಇತ್ತೀಚಿಗಷ್ಟೇ ಇರಾನ್‌ ಮತ್ತು ಪಾಕಿಸ್ತಾನಗಳು ಉಗ್ರನಿಗ್ರಹ ಕಾರ್ಯಚರಣೆ ಹೆಸರಲ್ಲಿ ಒಬ್ರ ವಿರುದ್ದ ಒಬ್ರು ಏರ್‌ಸ್ಟ್ರೈಕ್‌ ಮಾಡ್ಕೊಂಡಿದ್ರು. ಇದರಿಂದ ಎರಡೂ ದೇಶಗಳ ಸಂಬಂಧ ಹದಗೆಟ್ಟಿತ್ತು. ಇನ್ನು ಇತ್ತೀಚಿಗೆ ಇಸ್ರೇಲ್‌ ಜೊತೆಗೂ ಇರಾನ್‌ ಸಂಬಂಧ ಹದಗೆಟ್ಟಿದೆ. ಹೀಗಾಗಿ ಇರಾನ್‌ ಅಧ್ಯಕ್ಷರ ಈ ಪಾಕ್‌ ಭೇಟಿ ಸಾಕಷ್ಟು ಮಹತ್ವ ಪಡ್ಕೋತಿದೆ.

-masthmagaa.com

Contact Us for Advertisement

Leave a Reply