ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ನೇತೃತ್ವದ ಸರ್ಕಾರವನ್ನ ಮರುಸ್ಥಾಪನೆ ಮಾಡಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

masthmagaa.com:

ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ಪ್ರಹಸನಕ್ಕೆ ಸಂಬಂಧಪಟ್ಟಂತೆ ಕೂಡ ಸುಪ್ರೀಂ ಕೋರ್ಟ್‌ ದೊಡ್ಡ ಆದೇಶ ಕೊಟ್ಟಿದೆ. ಉದ್ಧವ್‌ ಠಾಕ್ರೆ ಬಣದ ಮಹಾ ವಿಕಾಸ ಅಘಾಡಿ ಸರ್ಕಾರವನ್ನ ಅಂದ್ರೆ ಕಾಂಗ್ರೆಸ್‌, ಎನ್‌ಸಿಪಿ ಹಾಗೂ ಶಿವಸೇನೆಯವರ ಸರ್ಕಾರವನ್ನ ಮರುಸ್ಥಾಪನೆ ಮಾಡಲು ಸಾಧ್ಯವಿಲ್ಲ ಅಂತ ಹೇಳಿದೆ. ಕಳೆದ ವರ್ಷ ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವಸೇನೆ ಶಾಸಕರು ಉದ್ದವ್‌ ಠಾಕ್ರೆ ವಿರುದ್ದ ಬಂಡಾಯ ಎದ್ದು, ಬಿಜೆಪಿಗೆ ಬೆಂಬಲ ಘೋಷಿಸಿದ್ರು. ಈ ಕೇಸ್‌ ಸಂಬಂಧ ಏಕನಾಥ್‌ ಶಿಂಧೆ ಹಾಗೂ 15 ಶಾಸಕರನ್ನ ಅನರ್ಹಗೊಳಿಸ್ಬೇಕು. ಜೊತೆಗೆ ಅಘಾಡಿ ಸರ್ಕಾರವನ್ನ ಮರುಸ್ಥಾಪನೆ ಮಾಡ್ಬೇಕು ಅಂತ ಉದ್ಧವ್‌ ಠಾಕ್ರೆ ಬಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಇದೀಗ ಕೋರ್ಟ್‌ ತೀರ್ಪು ಪ್ರಕಟಿಸಿದ್ದು, ಉದ್ಧವ್‌ ಅವ್ರು ವಿಶ್ವಾಸಮತ ಸಾಬೀತು ಪಡಿಸದೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸರ್ಕಾರವನ್ನ ಮರುಸ್ಥಾಪನೆ ಮಾಡಲು ಸಾಧ್ಯವಿಲ್ಲ ಅಂತ ಕೋರ್ಟ್‌ ಹೇಳಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಉದ್ಧವ್‌ ಠಾಕ್ರೆ, ನಾನು ರಾಜೀನಾಮೆ ನೀಡಿದ್ದು, ಕಾನೂನಾತ್ಮಕವಾಗಿ ತಪ್ಪಿರಬಹುದು ಆದ್ರೆ ನೈತಿಕವಾಗಿ ಸರಿಯಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply