ಮಸ್ಕ್‌ರ ʻಸ್ಟಾರ್‌ಲಿಂಕ್‌ʼ ಭಾರತದಲ್ಲಿ ಲಾಂಚ್‌ಗೆ ಗ್ರೀನ್‌ ಸಿಗ್ನಲ್‌!

masthmagaa.com:

ಸ್ವಲ್ಪ ದಿನಗಳಲ್ಲೇ ಟೆಕ್‌ ದಿಗ್ಗಜ ಎಲಾನ್‌ ಮಸ್ಕ್‌ ಅವ್ರು ಭಾರತಕ್ಕೆ ಭೇಟಿ ನೀಡಲಿರೋ ಹಿನ್ನಲೆ ಇದೀಗ ಅವ್ರ ಮಹತ್ವದ ಸ್ಟಾರ್‌ಲಿಂಕ್‌ ಯೋಜನೆ ಕುರಿತು ಸಿಹಿ ಸುದ್ದಿ ಕೇಳಿಬಂದಿದೆ. ʻಸ್ಟಾರ್‌ಲಿಂಕ್‌ʼ ಸ್ಯಾಟಲೈಟ್‌ ಕಮ್ಯುನಿಕೇಷನ್‌ ಯೋಜನೆ ಭಾರತದಲ್ಲಿ ಲಾಂಚ್‌ ಆಗೋ ಸಂಬಂಧ ದೊಡ್ಡ ಬೆಳವಣಿಗೆ ಆಗಿದೆ. ಯೋಜನೆ ಲಾಂಚ್‌ ಮಾಡಲು ಭಾರತ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದೆ. ಭಾರತದ ಟೆಲಿಕಮ್ಯುನಿಕೇಷನ್‌ ಇಲಾಖೆ ಇದಕ್ಕೆ ಆಲ್ಮೋಸ್ಟ್‌ ಒಪ್ಪಿಗೆ ಸೂಚಿಸಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅಂತಿಮವಾಗಿ ಗೃಹ ಇಲಾಖೆಯ ಪರಿಶೀಲನೆ ನಡೀಬೇಕಿದ್ದು, ಮಸ್ಕ್‌ ಅವ್ರು ಭಾರತಕ್ಕೆ ಭೇಟಿ ನೀಡಿದ ವೇಳೆ ಈ ಬಗ್ಗೆ ಎಲ್ಲಾ ಪ್ರಾಸೆಸ್‌ ಕಂಪ್ಲೀಟ್‌ ಮಾಡಲಾಗುತ್ತೆ ಅಂತ ಹೇಳಲಾಗ್ತಿದೆ. ಅಂದ್ಹಾಗೆ ಭಾರತದಲ್ಲಿ ಸ್ಟಾರ್‌ಲಿಂಕ್‌ನ್ನ ಲಾಂಚ್‌ ಮಾಡೋ ವಿಚಾರ ಕಳೆದ ಮೂರುವರೆ ವರ್ಷಗಳಿಂದ ಮಂದ ಗತಿಯಿಂದ ಸಾಗ್ತಿದ್ದು ಈಗ ವೇಗ ಸಿಕ್ಕಂತಿದೆ. ಮತ್ತೊಂದ್‌ ಕಡೆ ಟೆಸ್ಲಾ ಕಂಪನಿ ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್‌ ಪ್ರಮುಖ ಸೆಮಿಕಂಡಕ್ಟರ್‌ ಚಿಪ್‌ ತಯಾರಿಕೆ ಒಪ್ಪಂದ ಒಂದಕ್ಕೆ ಸಹಿ ಹಾಕಿವೆ. ತನ್ನ ಜಾಗತಿಕ ಆಪರೇಶನ್ಸ್‌ಗಳಿಗೆ ಚಿಪ್‌ ಸಪ್ಲೈ ಮಾಡೋಕೆ ಟೆಸ್ಲಾ ಟಾಟಾ ಜೊತೆ ಈ ಒಪ್ಪಂದ ಮಾಡ್ಕೊಂಡಿದೆ ಅಂತ ಗೊತ್ತಾಗಿದೆ. ಕೆಲವು ದಿನಗಳ ಹಿಂದಷ್ಟೇ ಟಾಟಾ ಹಾಗೂ ಟೆಸ್ಲಾ ಇವಿ ತಯಾರಿಕೆಯಲ್ಲೂ ಜಾಯಿಂಟ್‌ ವೆಂಚರ್‌ ಶುರು ಮಾಡುತ್ವೆ ಅಂತ ವರದಿಯಾಗಿತ್ತು.

-masthmagaa.com

Contact Us for Advertisement

Leave a Reply