ಬಾಹ್ಯಾಕಾಶಕ್ಕೂ ಕಾಲಿಡ್ತು ಯುಕ್ರೇನ್​-ರಷ್ಯಾ ಯುದ್ಧ!​

masthmagaa.com:

ಯುಕ್ರೇನ್​ ನೆಲದಲ್ಲಿ ರಷ್ಯಾ-ಯುಕ್ರೇನ್​ ನೇರಾನೇರ ಹೊಡೆದಾಳಿಕೊಳ್ತಿದ್ರೆ, ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ರಷ್ಯಾ ಜೊತೆ ಪರೋಕ್ಷ ಯುದ್ಧಕ್ಕೆ ಇಳಿದಿರೋದು ನಿಮ್ಗೆಲ್ಲಾ ಗೊತ್ತಿರೋ ವಿಚಾರ. ಭೂಮಿ ಮೇಲೆ ಇಷ್ಟೆಲ್ಲಾ ಸಂಘರ್ಷ, ದ್ವೇಷ ನಡೀತಿದ್ರೂ, ಬಾಹ್ಯಾಕಾಶ ಕ್ಷೇತ್ರದಲ್ಲಿ ರಷ್ಯಾ, ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಸ್ನೇಹ ಸಂಬಂಧ ಮುಂದುವರಿದಿತ್ತು. ಆದ್ರೀಗ ಬಾಹ್ಯಾಕಾಶ ಕ್ಷೇತ್ರಕ್ಕೂ ಸಂಘರ್ಷ ಎಂಟ್ರಿ ಕೊಟ್ಟಿದೆ. ಚಂದ್ರನ ಅಂಗಳಕ್ಕೆ ಹೋಗೋ ರಷ್ಯಾದ ಮೂರು ಬಾಹ್ಯಾಕಾಶ ಮಿಷನ್​​ಗೆ ಸಹಕಾರ ಕೊಡೋದನ್ನ ಯುರೋಪಿಯನ್​ ಸ್ಪೇಸ್​​ ಏಜೆನ್ಸಿ ನಿಲ್ಲಿಸಿದೆ. ರಷ್ಯಾದ Luna-25, 26 ಮತ್ತು 27 – ಈ ಮೂರು ಸರಣಿ ಮಿಷನ್​​ಗಳಿಂದ ತಮ್ಮ ಸಹಕಾರ ವಾಪಸ್​ ಪಡೆದಿರೋದಾಗಿ ಅದು ಘೋಷಿಸಿದೆ. ಎಲ್ಲವೂ ಅಂದುಕೊಂಡಂತೆಯಾಗಿದ್ರೆ, ಈ ಮಿಷನ್​ಗಳಲ್ಲಿ ಯುರೋಪಿಯನ್​ ಸ್ಪೇಸ್​ ಏಜೆನ್ಸಿ ತನ್ನ ಹೊಸ ಉಪಕರಣ ಮತ್ತು ತಂತ್ರಜ್ಞಾನಗಳನ್ನ ಪರೀಕ್ಷೆ ಮಾಡಬೇಕಿತ್ತು.

-masthmagaa.com

Contact Us for Advertisement

Leave a Reply