ʻಡಾರ್ಕ್‌ ಯುನಿವರ್ಸ್‌ʼ ಮಿಷನ್‌: ತಾನು ಸೆರೆಹಿಡಿದ ಮೊದಲ ಫೋಟೋಗಳನ್ನ ಹಂಚಿಕೊಂಡ ʻಯುಕ್ಲಿಡ್‌ ಟೆಲಿಸ್ಕೋಪ್‌ʼ

masthmagaa.com:

ಇತ್ತೀಚೆಗೆ ಲಾಂಚ್‌ ಆದ ʻಯುಕ್ಲಿಡ್‌ ಟೆಲಿಸ್ಕೋಪ್‌ʼ ಸೆರೆಹಿಡಿದಿರೋ ಮೊಟ್ಟಮೊದಲ ಫೋಟೋಗಳನ್ನ ಯುರೋಪ್‌ನ ಖಗೋಳಶಾಸ್ತ್ರಜ್ಞರು ರಿಲೀಸ್‌ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಕೊಟ್ಟಿರೋ ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ, ʻಯುಕ್ಲಿಡ್‌ ಟೆಲಿಸ್ಕೋಪ್‌ ಸೆರೆಹಿಡಿದಿರೋ ಫೋಟೋಗಳು ಸಿಕ್ಕಾಪಟ್ಟೆ ಶಾರ್ಪ್‌ ಅಗಿವೆ. ನಮ್ಮ ಭೂಮಿಯಿಂದ 10 ಬಿಲಿಯನ್‌ ಅಂದ್ರೆ 1000 ಕೋಟಿ ಜ್ಯೋತಿರ್ವಷ ಲೈಟ್‌ ಇಯರ್ಸ್‌ ದೂರವಿರೋ ಕೋಟಿಗಟ್ಟಲೆ ಗ್ಯಾಲಕ್ಸಿಗಳನ್ನ ಮಾನಿಟರ್‌ ಮಾಡಬಲ್ಲದು ಅಂತ ತನ್ನ ಸಾಮರ್ಥ್ಯ ತೋರಿಸಿಕೊಟ್ಟಿದೆʼ ಅಂತ ಹೇಳಿದ್ದಾರೆ. ಅಂದ್ಹಾಗೆ ʻಡಾರ್ಕ್‌ ಯೂನಿವರ್ಸ್‌ʼ ಅನ್ನೋ ಮಿಷನ್‌ಗಾಗಿ ಈ ಟೆಲಿಸ್ಕೋಪ್‌ ಕೆಲಸ ಮಾಡ್ತಿದೆ. ಇದರ ಭಾಗವಾಗಿ 95% ನಮ್ಮ ಯೂನಿವರ್ಸ್‌ ಅಂದ್ರೆ ಬ್ರಹ್ಮಾಂಡದ ಸೃಷ್ಟಿಗೆ ಕಾರಣವಾದ ಹಾಗೂ ಕಣ್ಣಿಗೆ ಗೋಚರಿಸದ ಡಾರ್ಕ್‌ ಮ್ಯಾಟರ್‌ ಮತ್ತು ಡಾರ್ಕ್‌ ಎನರ್ಜಿಗಳಂತಹ ಶಕ್ತಿಗಳ ಸೀಕ್ರೆಟ್‌ ತಿಳಿದುಕೊಳ್ಳೋಕೆ ಡಿಸೈನ್‌ ಮಾಡಲಾಗಿದೆ.

-masthmagaa.com

Contact Us for Advertisement

Leave a Reply