“ಇಸ್ಲಾಂ”ಗೆ ಯುರೋಪನಲ್ಲಿ ಜಾಗವಿಲ್ಲ: ಇಟಲಿ ಪ್ರಧಾನಿ ಮೆಲನಿ!

masthmagaa.com:

ಯುರೋಪನಲ್ಲಿ ಇಸ್ಲಾಂಗೆ ಅವಕಾಶ ಇಲ್ಲ ಅಂತ ಇಟಲಿ ಪ್ರಧಾನಿ ಜಾರ್ಜಿಯಾ ಮೆಲನಿ ಅಂತ ಗುಡುಗಿದ್ದಾರೆ. ರೋಮ್‌ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಮೆಲೋನಿ, ಷರಿಯತ್ ಕಾನೂನು ಜಾರಿ ಇರೋ ಸೌದಿ ಅರೇಬಿಯಾದಿಂದ ಇಟಲಿಯ ಇಸ್ಲಾಂ ಸಾಂಸ್ಕೃತಿಕ ಕೇಂದ್ರಗಳಿಗೆ ಹಣ ಹರಿದು ಬರ್ತಿದೆ ಅಂತ ಆರೋಪಿಸಿದ್ದಾರೆ. ʻನಮಗೂ ಇಸ್ಲಾಂ ಸಂಸ್ಕೃತಿಯ ಮೌಲ್ಯಗಳಿಗೂ ಬಹಳ ಅಂತರ ಇದೆ. ಯುರೋಪ್‌ನಲ್ಲಿ ನಾವು ಇಸ್ಲಾಂ ಕಲ್ಚರ್ ಜೊತೆ ಹೊಂದ್ಕೊಳ್ಳೋದು ಪ್ರಾಬ್ಲಮ್ಯಾಟಿಕ್‌ ಇದೆ. ಹೀಗಾಗಿ ಯುರೋಪ್‌ನಲ್ಲಿ ಇಸ್ಲಾಂಗೆ ಜಾಗ ಇಲ್ಲʼ ಅಂತ ಮೆಲನಿ ಹೇಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ʻಯುರೋಪ್‌ನಲ್ಲಿ ಹೆಚ್ಚುತ್ತಿರೋ ವಲಸಿಗರ ಸಮಸ್ಯೆಗೆ ಕಡಿವಾಣ ಹಾಕ್ಬೇಕು. ಇಲ್ದಿದ್ರೆ ಮುಂದೆ ಯುರೋಪ್‌ನ ಕೆಲವು ಪ್ರದೇಶಗಳನ್ನ ಅವ್ರೆ ಆಕ್ರಮಿಸಿ ಬಿಡ್ತಾರೆʼ ಅಂತ ಎಚ್ಚರಿಕೆ ನೀಡಿದ್ದಾರೆ. ʻಶತ್ರುಗಳು ಬೇಕಂತಲೇ ನಮ್ಮ ಸಮಾಜದಲ್ಲಿ ಅಶಾಂತಿ ಮೂಡಿಸಲು ಜನರನ್ನ ನಮ್ಮತ್ರ ಓಡಿಸ್ತಿದ್ದಾರೆ, ಈ ಸಮಸ್ಯೆಯನ್ನ ನಾವ್‌ ಈಗ್ಲೆ ಮಟ್ಟ ಹಾಕ್ಬೇಕು. ಇಲ್ಲದಿದ್ರೆ ಮುಂದೆ ವಲಸಿಗಲರ ಸಂಖ್ಯೆ ಹೆಚ್ಚಾಗುತ್ತೆ ಅಂತ ಸುನಕ್ ಹೇಳಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಟೆಸ್ಲಾ CEO ಎಲಾನ್‌ ಮಸ್ಕ್‌ ಮಾತನಾಡಿ ಇಟಲಿಯ ಕಲ್ಚರ್‌ಗೆ ಅದರದ್ದೆ ಆದ ವಿಶೇಷತೆ ಇದೆ. ಯುರೋಪ್‌ನ ಸಂಸ್ಕೃತಿಗಳೆಲ್ಲವನ್ನ ಕಾಪಾಡೋದು ಇಂಪಾರ್ಟೆಂಟ್‌ ಆಗಿದೆ ಅಂದಿದ್ದಾರೆ.

-masthmagaa.com

Contact Us for Advertisement

Leave a Reply