ಮೋದಿ ಸಂಪುಟದಲ್ಲಿದ್ದ ಗುಜರಾತ್‌ನ ಬಿಜೆಪಿ ನಾಯಕ ಕಾಂಗ್ರೆಸ್‌ಗೆ ಪಲಾಯನ!

masthmagaa.com:

ತೀವ್ರ ಕುತೂಹಲ ಕೆರಳಿಸಿರೋ ಗುಜರಾತ್‌ನ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲೇ ಪಕ್ಷಾಂತರ ಕೂಡ ಜೋರಾಗಿದೆ. ಇದೀಗ ಬಿಜೆಪಿಯ ಮಾಜಿ ಸಚಿವ ಜೈ ನಾರಾಯಣ್‌ ವ್ಯಾಸ್ ಕಾಂಗ್ರೆಸ್‌ ಪಕ್ಷಕ್ಕೆ ಜಂಪ್‌ ಆಗಿದ್ದಾರೆ. ಜೊತೆಗೆ ಇವರ ಮಗ ಸಮೀರ್‌ ವ್ಯಾಸ್‌ ಕೂಡ ಅಹಮದಾಬಾದ್‌ನಲ್ಲಿ ಕೈ ಪಾಳಯಕ್ಕೆ ಸೇರಿದ್ದಾರೆ. ನಾರಾಯಣ್‌ ವ್ಯಾಸ್‌ 2007 ರಿಂದ 2013ರ ವರೆಗೆ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಸಂಪುಟದಲ್ಲಿ ಫ್ಯಾಮಿಲಿ ವೆಲ್‌ಫೇರ್‌ ಡಿಪಾರ್ಟ್‌ಮೆಂಟ್‌ ನೋಡಿಕೊಂಡಿದ್ರು. ಇತ್ತ ಪತ್ನಿಗೆ ಟಿಕೆಟ್‌ ಕೊಟ್ಟಿರೋ ಸಲುವಾಗಿ ಬಿಜೆಪಿ ಪರ ಪ್ರಚಾರಕ್ಕಿಳಿದಿರೋ ಕ್ರಿಕೆಟರ್‌ ರವೀಂದ್ರ ಜಡೇಜ, ಜಾಮ್‌ ನಗರ ಕ್ಷೇತ್ರದಲ್ಲಿ ಪ್ರಚಾರ ಮಾಡ್ತಿದ್ದಾರೆ. ಅದೇ ಕ್ಷೇತ್ರದಲ್ಲಿ ಜಡೇಜ ಅಕ್ಕ ನೈನಾ ಜಡೇಜ ಸ್ಟಾರ್‌ ಕ್ಯಾಂಪೇನರ್‌ ಆಗಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply